ಸಿರಿ ರವಿಕುಮಾರ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲುಕ್‌ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ ಆದರೆ ರಾಜ್ ನಿರ್ದೇಶನ ಆಗಿರುವ ಕಾರಣ ನಿರೀಕ್ಷೆ ಕಡಿಮೆ ಅಗಿಲ್ಲ.
ಮೊದಲಿಗೆ ಈ ಸಿನಿಮಾದಲ್ಲಿ ಮೋಹಕ ತಾರೆ ರಮ್ಯಾ ನಟಿಸಬೇಕಿತ್ತು, ಆದರೆ ಸಿನಿಮಾ ಸ್ಕ್ರಿಪ್ಟ್ ರಮ್ಯಾ ಸೂಟ್ ಆಗೋಲ್ಲ, ಅನಿಸಿ ರಮ್ಯಾ ನಿರ್ದೇಶಕ ರಾಜ್ ಅವರಿಗೆ ಹೊಸಬರ ಪರಿಚಯ ಮಾಡುವಂತೆ ತಿಳಿಸಿದ್ದಾರಂತೆ
ಇನ್ನು ಫರ್ಸ್ಟ್ ಲುಕ್ ನೋಡಿದ ನೆಟ್ಟಿಗರು ಸಿರಿ ಸೂಪರ್ ಆಗಿ ಕಾಣಿಸುತ್ತಿದ್ದೀರಿ ಆದರೆ ಈ ಲುಕ್ ರಮ್ಯಾಗೆ ಸೂಟ್ ಆಗುವುದಿಲ್ಲ, ರಮ್ಯಾ ನಮಗೆ ಗ್ಲಾಮರ್ ನಟಿ…ಡೀ-ಗ್ಲಾಮ್ ಬೇಡವೇ ಬೇಡ’ ಎಂದಿದ್ದಾರೆ ನೆಟ್ಟಿಗರು
ಒಂದು ಮೊಟ್ಟೆಯ ಕತೆ, ಗರುಡ ಗಮನ ವೃಷಭ ವಾಹನ ಸಿನಿಮಾ ನಂತರ ರಾಜ್ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ.
18 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಿ ಮುಗಿಸಿದ್ದಾರಂತೆ.
ನಾವು ಚಿತ್ರಕ್ಕೆ ಸಿಂಪಲ್ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿರುವುದು ಹೀಗಾಗಿ ಕಡಿಮೆ ಸಮಯದಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಲು ಸಾಧ್ಯವಾಗಿದೆ. ಈ ಚಿತ್ರದ ಬೆಸ್ಟ್ ಪಾರ್ಟ್ ಏನೆಂದರೆ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗ ವಿಚಾರಗಳನ್ನು ತೋರಿಸಿರುವೆ’ ಎಂದಿದ್ದಾರೆ ರಾಜ್.ಬಿ. ಶೆಟ್ಟಿ