Hosakote News: ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ವ್ಯಕ್ತಿಯೋರ್ವ, ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನೂ ಬಂದಿಲ್ಲವೆಂದು ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾನೆ.
ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಈ ಡ್ರಾಮಾ ನಡೆದಿದ್ದು, ಕುಡುಕನೋರ್ವ ನನ್ನ ಹೆಂಡತಿ, ಫ್ರಿ ಬಸ್ ಎಂದು ಪ್ರವಾಸಕ್ಕೆ ಹೋದವಳು ಇನ್ನೂ ಮನೆಗೆ ಬಂದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆ, ಟ್ರಿಪ್ ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ ಎಂದು ಕುಡುಕ ಅವಾಂತರ ಮಾಡಿದ್ದಾನೆ. ಅಲ್ಲದೇ ಬಸ್ ಟೈರ್ಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಿರಿಕ್ ಮಾಡಿದ್ದಾನೆ. ಕುಡುಕನ ಅವಾಂತರದಿಂದ ಬಸ್ ನಲ್ಲಿ ಕುಳಿತ ಪ್ರಯಾಣಿಕರೂ ಪರದಾಡಿದ್ದಾರೆ.
ಸಿದ್ದರಾಮಯ್ಯ ಸರಿಯಿಲ್ಲ. ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ. ಉಚಿತ ಬಸ್ ಪ್ರಯಾಣವನ್ನು ತೆಗೆದು ಹಾಕಬೇಕೆಂದು ಕುಡುಕ ಒತ್ತಾಯಿಸಿದ್ದಾನೆ. ಟೈರ್ ಗೆ ತಲೆಕೊಡಲು ಯತ್ನಿಸಿದ ಕುಡುಕನನ್ನು ಸ್ಥಳೀಯರು ಹೊರಗೆ ಎಳೆದುತಂದು, ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಟ್ಟಾರೆಯಾಗಿ ಅರ್ಧ ಗಂಟೆ ಈ ಕುಡುಕು ಸಾರ್ವಜಜನಿಕರಿಗೆ ಬಿಟ್ಟಿ ಎಂಟರ್ಟೈನ್ಮೆಂಟ್ ಕೊಟ್ಟಿದ್ದು, ಈತನ ಅವಾಂತರವನ್ನು ಮೊಬೈಲ್ನಲ್ಲಿ ವೀಡಿಯೋ ಮಾಡಿಕೊಂಡು, ಸಾರ್ವಜನಿಕರು ಮಜಾ ತೆಗೆದುಕೊಂಡಿದ್ದಾರೆ.
2028ಕ್ಕೆ ಮತ್ತೆ Congress ಸರ್ಕಾರ ಬರುತ್ತಾ.? Siddaramaiah ಸರ್ಕಾರ 5 ವರ್ಷ ಇರಲ್ವಾ.?
ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ: ಇಬ್ಬರು ಯುವತಿಯರಿಗೆ ಗಂಭೀರ ಗಾಯ
2024ಕ್ಕೆ Narendra Modi ಪ್ರಧಾನಿ ಆಗ್ತಾರಾ.? ಆಗಲ್ವಾ.? ನಮೋಗೆ ಸ್ತ್ರೀ ಕಂಟಕ ಇದೆಯಾ.?


