ಮತಗಟ್ಟೆ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ..

ಬಳ್ಳಾರಿ: ಪ್ರತೀ ಬಾರಿ ರಾಜ್ಯದಲ್ಲಿ ಚುನಾವಣೆ ನಡೆಯುವಾಗ ಒಂದಿಲ್ಲೊಂದು ವಿಚಿತ್ರ ಘಟನೆ ನಡೆಯುತ್ತಲೇ ಇರುತ್ತದೆ. ಮತಗಟ್ಟೆಯಲ್ಲೇ ಮರಣ ಹೊಂದುವುದು, ಹೆರಿಗೆಯಾಗುವುದು ಇಂಥ ಅಪರೂಪದ ಘಟನೆ ನಡೆಯುತ್ತಲೇ ಇರುತ್ತದೆ. ಇಂದು ಕೂಡ ಬಳ್ಳಾರಿಯ ಮತಗಟ್ಟೆ ಆವರಣದಲ್ಲಿ ಓರ್ವ ಗರ್ಭಿಣಿ, ಮಗುವಿಗೆ ಜನ್ಮ ನೀಡಿದ್ದಾಳೆ. ಇಲ್ಲಿಯ ಕುರುಗೋಡು ತಾಲೂಕಿನ ಕೊರ್ಲಗುಂದಿ ಗ್ರಾಮದ ಮತದಾನ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಮಣಿಲಾ ಎಂಬ ಮಹಿಳೆಗೆ ಹೆರಿಗೆಯಾಗಿದೆ. ಈಕೆ ತುಂಬು ಗರ್ಭಿಣಿಯಾಗಿದ್ದು, ಮತದಾನ ಮಾಡಲು, ಮತಗಟ್ಟೆಗೆ ಆಗಮಿಸಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದಾರೆ. … Continue reading ಮತಗಟ್ಟೆ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ..