ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ

Movie News: ನಟಿ ಅದಿತಿ ಪ್ರಭುದೇವ ಏಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮನೆ ಮಹಾಲಕ್ಷ್ಮೀ ಎಂದು ಟ್ಯಾಗ್ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅದಿತಿಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. 2022ರ ನವೆಂಬರ್‌ನಲ್ಲಿ ಅದಿತಿ ಮತ್ತು ಯಶಸ್ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. 2024ರ ಜನವರಿಯಲ್ಲಿ ಅದಿತಿ ತಾಯಿಯಾಗುತ್ತಿದ್ದಾರೆಂಬ ಶುಭಸುದ್ದಿ ನೀಡಿದ್ದರು. ಕೆಲ ದಿನಗಳ ಹಿಂದಷ್ಟೇ ಅದಿತಿ ಸೀಮಂತ ಅದ್ಧೂರಿಯಾಗಿ ನೆರವೇರಿತ್ತು. ರವಿವರ್ಮನ ಪೇಂಟಿಂಗ್ ಸ್ಟೈಲ್‌ನಲ್ಲಿ, ಟ್ರೇಡಿಶನಲ್ ಸ್ಟೈಲ್‌ನಲ್ಲಿ ಅದಿತಿ ಫೋಟೋ ಶೂಟ್ ಮಾಡಿಸಿದ್ದರು. … Continue reading ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ