ಅಪಘಾತವಾಗಿ ಒಂದು ಗಂಟೆಯಾದರೂ ಸ್ಥಳಕ್ಕೆ ಬಾರದ ಆ್ಯಂಬುಲೆನ್ಸ್: ಯುವಕ ಸ್ಥಳದಲ್ಲೇ ಸಾವು

ಹಾಸನ: ಅಪಘಾತವಾಗಿ ಒಂದು ಗಂಟೆಯಾದರೂ ಆಂಬುಲೆನ್ಸ್ ಬಾರದ ಕಾರಣ, ಯುವಕನೊಬ್ಬ ನಡುರಸ್ತೆಯಲ್ಲಿ ಒದ್ದಾಡಿ ಪ್ರಾಣ ಬಿಟ್ಟ ಘಟನೆ ನಡೆದಿದೆ. ಆನಂದ್‌(30) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದ ಆನಂದ್‌ಗೆ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಹಾಸನ ತಾ. ಕಲ್ಕೆರೆ ಗ್ರಾಮದ ಬಳಿ ತಡರಾತ್ರಿ ಈ ಘಟನೆ ನಡೆದಿದ್ದು, ಆನಂದ್‌ ಬೇಲೂರು ಕಡೆಯಿಂದ ಹಾಸನದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ. ಮೃತ ಆನಂದ್ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದವನಾಗಿದ್ದು, ಘಟನೆ ಖಂಡಿಸಿ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. … Continue reading ಅಪಘಾತವಾಗಿ ಒಂದು ಗಂಟೆಯಾದರೂ ಸ್ಥಳಕ್ಕೆ ಬಾರದ ಆ್ಯಂಬುಲೆನ್ಸ್: ಯುವಕ ಸ್ಥಳದಲ್ಲೇ ಸಾವು