Friday, October 17, 2025

Latest Posts

ಬೆಂಗಳೂರಿನ ಟೌನ್ ಹಾಲ್ ಬಾಡಿಗೆ ದರ ಪರಿಷ್ಕರಣೆ: ಹೀಗಿದೆ ನೂತನ ದರಪಟ್ಟಿ

- Advertisement -

ಬೆಂಗಳೂರು: ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿಸಲು ಹಾಗೂ ಕನ್ನಡ ರಂಗಭೂಮಿಗೆ ರಂಗ ವೇದಿಕೆಗಳ ಕೊರತೆ ನೀಗಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಡೆತನದಲ್ಲಿರುವ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದ ಬಾಡಿಗೆ ದರವನ್ನು ಪರಿಷ್ಕರಿಸಲಾಗಿರುತ್ತದೆ.

ಅದರಂತೆ, ಈ ಹಿಂದೆ ಪೂರ್ತಿ ದಿನ(ಬೆಳಗ್ಗೆ 8.00 ರಿಂದ ರಾತ್ರಿ 10.00 ಗಂಟೆಯವರೆಗೆ)ಕ್ಕೆ ಎ.ಸಿ(Air Conditioner) ಇದ್ದರೆ 75,000 ರೂ. ಹಾಗೂ ನಾನ್ ಎ.ಸಿ(Non Air Conditioner)ಗೆ 60,000 ರೂ. ನಿಗದಿಪಡಿಸಲಾಗಿತ್ತು. ಇದೀಗ ದರ ಪರಿಷ್ಕರಿಸಿದ್ದು, ಪೂರ್ತಿ ದಿನಕ್ಕೆ ಎ.ಸಿಗೆ 60,000 ರೂ. ಹಾಗೂ ನಾನ್ ಎ.ಸಿಗೆ 50,000 ದರ ನಿಗದಿಪಡಿಸಲಾಗಿದ್ದು, ತೆರಿಗೆಗಳು ಪ್ರತ್ಯೇಕವಾಗಿರುತ್ತದೆ‌.

ಅಲ್ಲದೆ, ಮೊದಲಾರ್ಧ ದಿನ(ಬೆಳಗ್ಗೆ 8.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ) ಹಾಗೂ ದ್ವಿತಿಯಾರ್ಧ ದಿನ(ಮಧ್ಯಾಹ್ನ 3.00 ರಿಂದ ರಾತ್ರಿ 10.00 ಗಂಟೆಯವರೆಗೆ)ಕ್ಕೆ ಎ.ಸಿಗೆ 30,000 ಹಾಗೂ ನಾನ್ ಎ.ಸಿಗರ 25,000 ರೂ. ದರ ನಿಗದಿಪಡಿಸಿದ್ದು, ತೆರಿಗೆಗಳು ಪ್ರತ್ಯೇಕವಾಗಿರುತ್ತದೆ‌.

ಕನ್ನಡ ರಂಗಭೂಮಿಯ ಎಲ್ಲಾ ನಾಟಕ – ಪ್ರಸಂಗಗಳಿಗೆ ಹಾಗೂ ವಿಶೇಷ ಅನುಮತಿ ಪಡೆದ ಕಾರ್ಯಕ್ರಮಗಳಿಗೆ ಪರಿಷ್ಕೃತ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗುವುದು. ಪರಿಷ್ಕೃತ ದರಗಳು ಹಾಗೂ ರಿಯಾಯಿತಿ ಸೌಲಭ್ಯವು ಇದೇ “2022 ರ ಸೆಪ್ಟೆಂಬರ್ 1 ರಿಂದ” ಜಾರಿಗೆ ಬರಲಿದೆ.

ಕನ್ನಡ ರಂಗಭೂಮಿಗೆ ಬಿಬಿಎಂಪಿ ವತಿಯಿಂದ ಗೌರಿ-ಗಣೇಶ ಹಬ್ಬದ ಉಡುಗೊರೆ ನೀಡುತ್ತಿದ್ದು, ಬೆಂಗಳೂರಿನ ಸಾಂಸ್ಕೃತಿಕ ಹಾಗೂ ರಂಗಭೂಮಿ ಸಂಘಟನೆಗಳು ಪುರಭವನದ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಲು ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ್ ರಾಯ್ ಪುರ ರವರು ಕೋರಿರುತ್ತಾರೆ‌.

- Advertisement -

Latest Posts

Don't Miss