Pradeep Shetter: ಬಿಜೆಪಿ ಬಗ್ಗೆ ಅಸಮಾಧಾನವಿಲ್ಲ, ಪಕ್ಷದ ನಿರ್ಧಾರದ ಬಗ್ಗೆ ದೊಡ್ಡವರು ಹೇಳ್ತಾರೆ; ಪ್ರದೀಪ್ ಶೆಟ್ಟರ್..!

ಹುಬ್ಬಳ್ಳಿ: ಕಳೆದ ವರ್ಷದಂತೆ ಈ ವರ್ಷವೂ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಯಾಗಿದೆ. ವಿಜೃಂಭಣೆಯಿಂದ ಗಣೇಶ ಮೆರವಣಿಗೆ ಮಾಡಿದ್ದೇವೆ. ಈದ್ಗಾ ಗಣೇಶೋತ್ಸವ ಹೋರಾಟದಲ್ಲಿ ಭಾಗಿಯಾಗದಿರುವುದಕ್ಕೆ ಕಾರಣ ಕಾನ್ಫರೆನ್ಸ್ ಇದ್ದಿದ್ದರಿಂದ ನಾನು ಬೇರೆ ಊರಿಗೆ ಹೋಗಿದ್ದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ದರ್ಶನ ಪಡೆದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಪಂಜಾಬ್, ರಾಜಸ್ಥಾನ ರಾಜ್ಯಗಳಿಗೆ ಹೋಗಿದ್ದೆ. ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಮುಂಚಿತವಾಗಿಯೇ ನಾನು ಜಿಲ್ಲಾಧ್ಯಕ್ಷರಿಗೆ ಹೇಳಿದ್ದೆ ಎಂದರು. … Continue reading Pradeep Shetter: ಬಿಜೆಪಿ ಬಗ್ಗೆ ಅಸಮಾಧಾನವಿಲ್ಲ, ಪಕ್ಷದ ನಿರ್ಧಾರದ ಬಗ್ಗೆ ದೊಡ್ಡವರು ಹೇಳ್ತಾರೆ; ಪ್ರದೀಪ್ ಶೆಟ್ಟರ್..!