‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”-“ಚಿಂತನಾ ಗೋಷ್ಠಿ”ಆಹ್ವಾನ:

State News: ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ ೧೨-೧೦-೨೦೨೨ರಂದು ಬುಧವಾರ ಬೆಳಗ್ಗೆ ೧೧.೦೦ ಗಂಟೆಗೆ  ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಜಾರಿಗೆ ತರುವ ಕುರಿತಂತೆ ಚರ್ಚಿಸಲು ನಾಡಿನ ಗಣ್ಯರನ್ನೊಳಗೊಂಡ “ಚಿಂತನಾ ಗೋಷ್ಠಿ”  ಹಮ್ಮಿಕೊಳ್ಳಲಾಗಿದೆ. ನ್ಯಾಯಮೂರ್ತಿ ಶ್ರೀ ಎಸ್.ಆರ್. ಬನ್ನೂರಮಠ ನೇತೃತ್ವದ ಕರ್ನಾಟಕ ಕಾನೂನು ಆಯೋಗವು ತನ್ನ ಐವತ್ತೇಳನೇ ವರದಿಯಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಅನ್ನು ಸಿದ್ಧಪಡಿಸಿ, ವರದಿಯ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. … Continue reading ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”-“ಚಿಂತನಾ ಗೋಷ್ಠಿ”ಆಹ್ವಾನ: