ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಸಿಎಂ ಬೊಮ್ಮಾಯಿ

75ರ ಅಮೃತ ಮಹೋತ್ಸದ ಸಡಗರದಲ್ಲಿ ದೇಶವೇ ರಂಗೇರಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.ಕಿತ್ತೂರು ರಾಣಿ ಚೆನ್ನಮ್ಮರ ಧೈರ್ಯವನ್ನು ಸ್ಮರಿಸಿ ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿದರು. ದಾದಾಸಾಹೇಬ್ ಪಾಲ್ಕೆಯವರ ತ್ಯಾಗಕ್ಕೆ ಸಾಟಿಯಿಲ್ಲ, ಗಾಂಧೀಜಿಯ ಸತ್ಯಾಗ್ರಹಕ್ಕೆ ಸತ್ಯವೇ ಸಾಕ್ಷಿ,ಅಂಬೇಡ್ಕರ್ ಕೊಡುಗೆಯನ್ನು ಮರೆಯುವಂತಿಲ್ಲ ಎಂಬುವುದಾಗಿ ಪ್ರತಿಯೊಬ್ಬ ಹೋರಾಟಗಾರರಿಗೂ ಈ 75ರ ಸ್ವಾತಂತ್ರ್ರೋತ್ಸವ ಸಮರ್ಪಣೆ ಎಂಬುದಾಗಿ ಹೋರಾಡಿದ ಪ್ರತಿಯೊಬ್ಬ ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸಿದರು.