ರಾಜ್ಯದ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಕೋರಿದ ಸಿಎಂ

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 75 ರ ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯಲ್ಲಿ, ಧ್ವಜಾರೋಹಣ ನೆರವೇರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ತದನಂತರ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಸಿಎಂ ರಾಜ್ಯದ ಜನತೆಗೆ 75 ರ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು. ನಂತರ ದೇಶಕ್ಕಾಗಿ ಪ್ರಾಣತೆತ್ತ ಅದೆಷ್ಟೋ ಮಹನೀಯರನ್ನು ಸ್ಮರಿಸಿ, ಅನಾಮಧೇಯ ಹೋರಾಟಗಾರರರಿಗೆ 75ರ ಸ್ವಾತಂತ್ರ್ಯೋತ್ಸವವನ್ನು ಸಮರ್ಪಿಸುತ್ತೇನೆ ಎಂಬುದಾಗಿ ಹೇಳಿದರು.