ಕೆಂಪೇಗೌಡರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಬಿಬಿಎಂಪಿ ನಿರ್ಧಾರ : 31 ಸಾಧಕರಿಗೆ ಪ್ರಶಸ್ತಿ ವಿತರಣೆ

ಬೆಂಗಳೂರು : ಬಿಬಿಎಂಪಿ ಯಿಂದ ಈ ಸಲ ಕೆಂಪೆಗೌಡರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೊವಿಡ್ ನಿಂದಾಗಿ 2 ವರ್ಷ ಕೆಂಪೆಗೌಡರ ಜನ್ಮದಿನ ಆಚರಿಸಲಾಗಲಿಲ್ಲ, ಹಾಗಾಗಿ ಈ ಸಲ ಬಿಬಿಎಂಪಿ ನೌಕರರ ಸಂಘದ ಬೇಡಕೆಯಂತೆ ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಮಿತಿ ಸ್ಥಳ ನಿರ್ಧಾರ ಮಾಡುತ್ತದೆಂದು ಹೇಳಿದರು. 31 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಸಿದರು.