ತುಮಕೂರು ತಾಲೂಕು ಕಚೇರಿಗೆ ಸಚಿವರ ಧಿಡೀರ್ ಭೇಟಿ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು

Tumakuru News: ತುಮಕೂರು: ತುಮಕೂರು ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಧಿಡೀರ್ ಭೇಟಿ ನೀಡಿದ್ದು, ಸಚಿವರನ್ನು ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ತೆರಳುವಾಗ, ಮಾರ್ಗಮಧ್ಯೆ ತುರುವೆಕೆರೆ ತಾಲೂಕಿನ ಕಚೇರಿಗೆ ಸಚಿವರು ಭೇಟಿ ನೀಡಿದ್ದಾರೆ. ಇನ್ನು ಸಚಿವರ ಮುಂದೆ ರೈತರು ಮತ್ತು ಸಾರ್ವಜನಿಕರು ಸಾಲು ಸಾಲು ಸಮಸ್ಯೆ ಹೇಳಿಕೊಂಡಿದ್ದಾರೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಜಮೀನಿನಲ್ಲಿ ಓಡಾಡಲು ಸರಿಯಾಗಿ ರಸ್ತೆ ಇಲ್ಲ.  ಹೀಗೆ ರೈತರು, ಸಾರ್ವಜನಿಕರು ಸಚಿವರ ಮುಂದೆ ಸಮಸ್ಯೆ ಹೇಳಿಕೊಂಡಿದ್ದು, ಕೃಷ್ಣಭೈರೇಗೌಡ ಎಲ್ಲರ ಸಮಸ್ಯೆ ಆಲಿಸಿದ್ದಾರೆ. … Continue reading ತುಮಕೂರು ತಾಲೂಕು ಕಚೇರಿಗೆ ಸಚಿವರ ಧಿಡೀರ್ ಭೇಟಿ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು