BREAKING NEWS: ಪೋಕ್ಸೋ ಪ್ರಕರಣದಲ್ಲಿ ಕೊನೆಗೂ ಮುರುಘಾ ಶ್ರೀ ಅರೆಸ್ಟ್

ಹಾವೇರಿ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಬಳಿಕ, ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೇ, ಮುರುಘಾ ಮಠದ ಶ್ರೀಗಳು ಮಹಾರಾಷ್ಟ್ರಕ್ಕೆ ತಲೆ ಮರೆಸಿಕೊಳ್ಳೋದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳುತ್ತಿರೋ ಖಚಿತ ಮಾಹಿತಿಯನ್ನು ಪಡೆದಂತ ಚಿತ್ರದುರ್ಗದ ಗ್ರಾಮಾಂತರ ಠಾಣೆಯ ಪೊಲೀಸರು, ಮುರುಘಾ ಶರಣರನ್ನು ಹಾವೇರಿ ಬಳಿಯ ಬಂಕಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಶಕ್ಕೆ ಪಡೆದಿದ್ದಾರೆ.