Friday, November 14, 2025

Latest Posts

ರಷ್ಯಾದ ಪುಟಿನ್‌ ಎದುರೇ ಪಾಕ್‌ PMಗೆ ಮುಜುಗರ!

- Advertisement -

ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ, ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಭಾಗಿಯಾಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಆಪ್ತವಾಗಿ ಕಾಣಿಸಿಕೊಂಡಿದ್ದಾರೆ. ಇದು ಅಮೆರಿಕಾ, ಪಾಕಿಸ್ತಾನದ ನಿದ್ದೆಗೆಡುವಂತೆ ಮಾಡಿದೆ. ಈ ಬೆನ್ನಲ್ಲೇ ಬೀಜಿಂಗ್‌ನಲ್ಲಿ ರಷ್ಯಾ, ಪಾಕಿಸ್ತಾನ ನಡುವೆ ದ್ವಿಕ್ಷೀಯ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಪಾಕ್‌ ಪಿಎಂ ಷರೀಫ್‌ಗೆ ಮುಜುಗರದ ಸನ್ನಿವೇಶ ಎದುರಾಗಿದೆ.

ರಷ್ಯಾ ಅಧ್ಯಕ್ಷ ಪುಟಿನ್‌ ಎದುರಲ್ಲೇ, ಕಿವಿಗೆ ಹೆಡ್‌ಸೆಟ್‌ ಹಾಕಿಕೊಳ್ಳಲು ಶೆಹಬಾಜ್‌ ಷರೀಫ್‌ ಪರದಾಡಿದ್ದಾರೆ. ಇಯರ್‌ ಫೋನ್‌ ಹಾಕಿಕೊಳ್ಳಲು ಷರೀಫ್‌ ಪರದಾಡ್ತಿದ್ರೆ, ಪುಟಿನ್‌ ವ್ಯಂಗ್ಯವಾಡುವ ರೀತಿ ನಕ್ಕಿದ್ದಾರೆ. ತಮ್ಮ ಹೆಡ್‌ಫೋನ್ ಅನ್ನು ಕೈಯಲ್ಲಿಡಿದು, ಹೇಗೆ ಹಾಕಿಕೊಳ್ಳಬೇಕು ಎಂದು ಷರೀಫ್‌ಗೆ ತಿಳಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಷರೀಫ್ ತಮ್ಮ ಹೆಡ್‌ಫೋನ್‌ ಅನ್ನು ಸರಿಯಾಗಿ ಹಾಕಿಕೊಂಡಿದ್ದಾರೆ.

2022ರಲ್ಲೂ ವ್ಲಾದಿಮಿರ್ ಪುಟಿನ್ ಭೇಟಿ ವೇಳೆಯೇ, ಇಂಥದ್ದೇ ರೀತಿಯ ಮುಜುಗರದ ಘಟನೆಯನ್ನು ಶಾಹಬಾಜ್ ಷರೀಫ್ ಅನುಭವಿಸಿದ್ದರು. ಆಗಲೂ ಕೂಡ ಇಯರ್‌ ಫೋನ್‌ ಧರಿಸಲು ಷರೀಫ್ ಒದ್ದಾಡಿದ್ದರು. ಮತ್ತೆ ಅದೇ ರೀತಿಯ ಘಟನೆ, ಸನ್ನಿವೇಶ ಎದುರಾಗಿದೆ. ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷರ ಗಮನ ಸೆಳೆಯಲು ಮತ್ತು ಮೆಚ್ಚಿಸಲು, ಪಾಕಿಸ್ತಾನ ಪ್ರಧಾನಿಯವರ ಪ್ರಯತ್ನ ಭಾರೀ ವೈರಲ್‌ ಆಗಿದೆ. ಪುಟಿನ್‌ಗೆ ಶೇಕ್‌ಹ್ಯಾಂಡ್‌ ಮಾಡಲು ಷರೀಫ್ ಓಡೋಡಿ ಹೋಗಿದ್ದರು. ಆ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ ಆಗಿದೆ.

- Advertisement -

Latest Posts

Don't Miss