praladh joshi:ಬಿಜೆಪಿಯನ್ನು ಬೈದಿದ್ದೇ ಹೆಚ್ಚು

ಹುಬ್ಬಳ್ಳಿ: ನಿನ್ನೆ ನಡೆದ ರಾಜ್ಯ ಬಜೆಟ್ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರು ನಿನ್ನೆ ನಡೆದ ಬಜೆಟ್ ಮಂಡನೆಯಲ್ಲಿ  ಅನುದಾನದ ಬಗ್ಗೆ ಹೇಳಿದಕ್ಕಿಂತ ಬಿಜೆಪಿಯನ್ನು ಬೈದಿದ್ದೇ ಹೆಚ್ಚು ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೋವಿಡ್ ನಿರ್ಮಹಣೆ ಬಗ್ಗೆ ಮಾತನಾಡಿದ್ದಾರೆ.ಕೋವಿಡ್ ಸಮಯದಲ್ಲಿ ನಾವು ತಡೆಗಟ್ಟುವ ಬಗ್ಗೆ ಏನೆಲ್ಲ ಪ್ರಯತ್ನ ಪಟ್ಟಿದ್ದೇವೆ. ಇದೇ ಮೊದಲ ಬಾರಿಗೆ ದೇಶದಲ್ಲಿ ವ್ಯಾಕ್ಸಿನ್ ತಯಾರಿಸಿ ಎಲ್ಲರಿಗೂ ನೀಡಿದ್ದೇವೆ,ಅಲ್ಲದೇ ಬೇರೆ ದೇಶಗಳಿಗೂ ಕೊಟ್ಟಿದ್ದೇವೆ ಇದನ್ನೇ ಸಿದ್ದರಾಮಯ್ಯನವರು ಪ್ರಶ್ನೆ ಮಾಡಿದ್ದಾರೆ.

ಆಸ್ತಿಯ ತೆರಿಗೆ ಏರಿಕೆ ಮಾಡಿದ್ದಾರೆ. ಮದ್ಯದ ದರವನ್ನೂ ಸಹ ಜಾಸ್ತಿ ಮಾಡಿದ್ದಾರ. ಎಲ್ಲಾರಿಗೂ ಮಧ್ಯಪಾನ ಮಾಡಿಸಿ ಹಣ ತಂದು ಕೊಡಿ ಎನ್ನವ ಹಾಗಿದೆ.ಮೊದಲು ಶಿಕ್ಷಣದಲ್ಲಿ ಎನ್ ಇ ಪಿ  ಶಿಕ್ಷಣಕ್ಕೆ ಒಪ್ಪಿಗೆ ನೀಡಿತ್ತು ಆದರೆ ಈಗ ಸಂಪೂರ್ಣವಾಗಿ ರದ್ದು ಮಾಡಿದ್ದಾರೆ.ಈ ಸರ್ಕಾರದಿಂದ ಮೂಲಭೂತ ಸೌಕರ್ಯಗಳು ನೆಲಕಚ್ಚುವ ಈತಿ ಈ ಬಜೆಟ್ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕರಿಗೆ ಅನುದಾನ ಕೇಳಬೇಡಿ ಅಂತ ನೇರವಾಗಿ ಹೇಳುತಿದ್ದಾರೆ ಕಾಂಗ್ರೆಸ್ ಯಾವ ಸ್ಥಿತಿಗೆ ಬಂದು ನಿಂತಿದೆ ಎಂಬುದು ಇದಕ್ಕೆ ಸಾಕ್ಷಿ. ಯುವ ಶಕ್ತಿಗೆ ಹಣ ಇಟ್ಟಿಲ್ಲ. ಈಗ ಗೃಹಲಕ್ಷ್ಮಿಗೆ ಹಣ ಇಟ್ಟಿದ್ದಾರೆ.ರೈಲ್ವೆ ಯೋಜನೆಗೆ ಹಣ ಇಟ್ಟಿಲ್ಲ. ಸಿದ್ದರಾಮಯ್ಯ ಹಿಟ್ಲರ್ ರೀತಿರಾಜಕಾರಣ ಮಾಡುತಿದ್ದಾರೆ ಇದನ್ನು ಹೆದರಿಸಲು ನಾವು ಸಿದ್ದ ಎಂದು ಹೇಳಿದರು.

ಕ್ರಮಬದ್ಧವಾಗಿ ಊಟ ಮಾಡುವ ವಿಧಾನದ ಬಗ್ಗೆ ಮಾಹಿತಿ..

ತಿಮಿಂಗಲ ಮೂಳೆಗಳಿಗೆ ಪೂಜೆ ಮಾಡುವ ದೇವಾಲಯ

film news: ಅಯೋಧ್ಯೆಯಲ್ಲಿ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಿದ ಅರುಣ್ ರಾಮ್ ಗೌಡ .

 

 

About The Author