ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕ್ರೇಜ್..!

ಲಾಸ್ ಎಂಜಲೀಸ್ ನಿಂದ ವಾರಂಗಲ್ ವರೆಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ‘ವಾಲ್ಟೇರ್ ವೀರಯ್ಯ’ ಸಕ್ಸಸ್ ಮೀಟ್ ನಲ್ಲಿ ಚಿರಂಜೀವಿಯನ್ನು ಬೆಂಬಲಿಸಲು ಬಂದ ರಾಮ್ ಚರಣ್ ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಎಸ್. ಎಸ್ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರದಲ್ಲಿ ಅಮೋಘ ಅಭಿನಯದ ಮೂಲಕ ರಾಮ್ ಚರಣ್ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆ ಪಡುವಂತೆ ಮಾಡಿದ್ದಾರೆ.