ಶಿವಮೊಗ್ಗ: ಆ.31ರಂದು ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ

ಶಿವಮೊಗ್ಗ : ಆಗಸ್ಟ್ 31 ರಂದು ಗಣೇಶ ಚತುರ್ಥಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದ್ದು ಮಾಂಸ ಮಾರಾಟ ಉದ್ದಿಮೆದಾರರು ಅಂದು ಮಾರಾಟ ಬಂದ್ ಮಾಡಿ ಸಹಕರಿಸಲು ಕೋರಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.