ನಡೆದಾಡುವ ದೇವರ 4ನೇ ವರ್ಷದ ಪುಣ್ಯ ಸ್ಮರಣೆ..!

Special News: ಜನವರಿ 21 ಧರೆಗಿಳಿದ ಸಾಕ್ಷಾತ್ ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದ ದಿನ. ತ್ರಿವಿಧ ದಾಸೋಹಿಗಳು ಶಿವೈಕ್ಯರಾಗಿ ಇಂದಿಗೆ ಬರೊಬ್ಬರಿ 4 ವರ್ಷ ಉರುಳಿದೆ..ಇಂದು ಬೆಳಗ್ಗಿನಿಂದಲೇ ಶ್ರೀಗಳ ಸಂಸ್ಮರಣೋತ್ಸವವನ್ನು ಅತ್ಯಂತ ಶ್ರದ್ದಾಭಕ್ತಿಪೂರ್ವಕವಾಗಿ ಆಚರಿಸಲಾಗಿದೆ. ಶ್ರೀಗಳ ಗದ್ದುಗೆಯನ್ನು ದೀಪಾಲಂಕಾರ, ವಿಶೇಷ ಪುಷ್ಪ ಅಲಂಕಾರದಿಂದ ಸಿಂಗರಿಸಿ ಭಕ್ತಿ ಸಮರ್ಪಣೆ ಮಾಡಲಾಯಿತು.ಬೆಳಗ್ಗೆ 5.30 ಕ್ಕೆ ಮಹಾರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚನೆ ಮಾಡಲಾಯಿತು. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಗಳ ಉಪಸ್ಥಿತಿಯಲ್ಲಿ ಮಂತ್ರಘೋಷಗಳ ಮೂಲಕ ಮಹಾಮಂಗಳಾರತಿ ಮಾಡಿ ಭಕ್ತಿ ಅರ್ಪಿಸಿದರು. … Continue reading ನಡೆದಾಡುವ ದೇವರ 4ನೇ ವರ್ಷದ ಪುಣ್ಯ ಸ್ಮರಣೆ..!