ಅಮಾನತುಗೊಂಡಿದ್ದ ಸರ್ಕಲ್ ಇನ್ಸಪೆಕ್ಟರ್ ಹೃದಯಾಘಾತದಿಂದ ಸಾವು..

ಕೆಆರ್ ಪುರ: ಅಮಾನತುಗೊಂಡಿದ್ದ ಸರ್ಕಲ್ ಇನ್ಸಪೆಕ್ಟರ್ ನಂದೀಶ್ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹುಣಸೂರು ಮೂಲದ ನಂದೀಶ್, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಪಬ್‌ವೊಂದು ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ನಂದೀಶ್ ಅಮಾನತುಗೊಂಡಿದ್ದರು. ಆದ್ರೆ ಇಂದು ನಂದೀಶ್‌ಗೆ ಹೃದಯಾಘಾತವಾಗಿದ್ದು, ಕೆಆರ್‌ಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಂದೀಶ್ ಸಾವನ್ನಪ್ಪಿದ್ದಾರೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಹೀಗೆ ಪೂಜೆ ಮಾಡಿ…! ಕಾರ್ತಿಕ ಸೋಮವಾರ ಉಪವಾಸದ ನಿಯಮಗಳೇನು…?