Business Tips: ವಾರನ್ ಬಫೆಟ್. ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವ. ಇವರು ಹಲವಾರು ಬ್ಯುಸಿನೆಸ್ ರೂಲ್ಸ್ ಹೇಳಿದ್ದು, ಅದರಲ್ಲಿ ಇಂದು 5 ರೂಲ್ಸ್ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
ಮೊದಲನೇಯ ನಿಯಮ, ಉಳಿತಾಯದ ಬಗ್ಗೆ ಗಮನ ಕೊಡಿ. ಬಫೆಟ್ ಪ್ರಕಾರ, ಖರ್ಚು ಮಾಡಿದ ಬಳಿಕ ಏನು ಉಳಿಯುತ್ತದೆಯೋ, ಅದನ್ನು ಉಳಿತಾಯ ಮಾಡುವುದಲ್ಲ. ಬದಲಾಗಿ ಉಳಿತಾಯದ ಬಳಿಕ ಏನು ಉಳಿಯುತ್ತದೆಯೋ, ಅದನ್ನು ಖರ್ಚು ಮಾಡಬೇಕು. ಅಂದ್ರೆ ಹೆಚ್ಚಿನ ದುಡ್ಡನ್ನು ಉಳಿತಾಯಕ್ಕೆ ಹಾಕಬೇಕು. ಮತ್ತು ನಿಮಗೆ ಯಾವ ವಸ್ತುವಿನ ಅವಶ್ಯಕತೆ ಇದೆಯೋ, ಅದನ್ನು ಕೊಂಡುಕೊಳ್ಳಲು ಮಾತ್ರವೇ, ದುಡ್ಡನ್ನು ಖರ್ಚು ಮಾಡಬೇಕು. ಜನರ ಕಣ್ಣಿಗೆ ಚೆಂದಗಾಣಲಿ ಎಂದು ನೀವು ನಿಮ್ಮ ಜೇಬನ್ನು ಖಾಲಿ ಮಾಡಿಕೊಳ್ಳಬೇಡಿ ಎನ್ನುತ್ತಾರೆ ವಾರನ್ ಬಫೆಟ್.
ಎರಡನೇಯ ನಿಯಮ, ಸಾಲದಿಂದ ಸದಾ ದೂರವಿರಿ. ಅಂದರೆ ನೀವು ಎಷ್ಟು ದುಡಿಯುತ್ತೀರೋ, ಅದರಲ್ಲಿ ಬೇಕಾದಷ್ಟು ಖರ್ಚು ಮಾಡಿ, ಉಳಿತ ಹಣ್ಣವನ್ನು ಉಳಿತಾಯಕ್ಕೆ ಇಡಬೇಕು. ಅದನ್ನು ಬಿಟ್ಟು, ನಿಮ್ಮ ಸಂಬಳಕ್ಕಿಂತ ಹೆಚ್ಚು ಖರ್ಚು ಮಾಡಿ, ಇನ್ನೊಬ್ಬರ ಬಳಿ ಸಾಲ ಕೇಳಿ, ನಾಚಿಕೆ ಗೆಡಬಾರದು ಎಂದಿದ್ದಾರೆ ವಾರನ್.
ಮೂರನೇಯ ನಿಯಮ, ಕಂಡಕಂಡಲ್ಲಿ ದುಡ್ಡು ಇನ್ವೆಸ್ಟ್ ಮಾಡಿ, ಮೋಸ ಹೋಗಬೇಡಿ. ನಮ್ಮಲ್ಲಿ ಹಲವು ಮಹಿಳೆಯರು ಚೀಟಿ ಹಾಕುವ ಕೆಲಸ ಮಾಡಿ, ತಾವು ಹಲವು ವರ್ಷಗಳಲ್ಲಿ ಕೂಡಿಟ್ಟ ಹಣವನ್ನು ಒಂದೇ ಸಲ ಕಲೆದುಕೊಂಡವರಿದ್ದಾರೆ. ಇಂಥ ಮೋಸಗಳಾಗುವ ಕಾರಣಕ್ಕೆ, ನೀವು ಕಷ್ಟಪಟ್ಟು ದುಡಿದು, ಕೂಡಿಡುವ ಹಣವನ್ನು, ಸೇಫ್ಟಿ ಇಲ್ಲದ ಕಡೆ ಇನ್ವೆಸ್ಟ್ ಮಾಡಬೇಡಿ ಎನ್ನುತ್ತಾರೆ ಬಫೆಟ್.
ನಾಲ್ಕನೇಯ ನಿಯಮ, ಬರೀ ಒಂದೇ ಕೆಲಸ ಮಾಡಿದರೆ, ನೀವು ಶ್ರೀಮಂತರಾಗಲು ಸಾಧ್ಯವಿಲ್ಲ. ವಾರನ್ ಬಫೆಟ್ ಹೇಳುವುದೇನೆಂದರೆ, ಯಾರು ನಿದ್ರಿಸುತ್ತಿರುವಾಗಲೂ,ಹಣ ಗಳಿಸುವ ಯೋಚನೆ ಮಾಡುವುದಿಲ್ಲವೋ, ಅಂಥವರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ. ಅಂದ್ರೆ ಮನೆ ಬಾಡಿಗೆ, ಪಿಜಿ, ಜಾಗ ಬಾಡಿಗೆ ಕೊಡುವುದು, ಶೇರ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡುವುದು. ಹೀಗೆ ದುಡಿಮೆ ಬಿಟ್ಟು, ಇನ್ನೊಂದು ರೀತಿಯಲ್ಲೂ ಹಣ ಗಳಿಕೆ ಮಾಡಬೇಕು ಎನ್ನುತ್ತಾರೆ, ವಾರನ್ ಬಫೆಟ್.
ಐದನೇಯ ನಿಯಮ, ಲಾಂಗ್ ಟರ್ಮ್ ಕೆಲಸಗಳ ಬಗ್ಗೆ ಯೋಚಿಸಿ. ಉದಾಹರಣೆಗೆ ನೀವು ಶೇರ್ ಮಾರುಕಟ್ಟೆಯಲ್ಲಿ ಹಣ ಹೂಡಿ, ಬೇಗ ಶ್ರೀಮಂತರಾಗಲು ಯೋಚಿಸಿದ್ದಲ್ಲಿ, ನೀವು ನಿಮ್ಮ ಮೂರ್ಖತನದಿಂದ, ನಿಮ್ಮ ಎಲ್ಲ ದುಡ್ಡನ್ನು ಕಳೆದುಕೊಳ್ಳಬಹುದು. ಅದರ ಬದಲು, ಯೋಚಿಸಿ ಬುದ್ಧಿವಂತಿಕೆಯಿಂದ ವರ್ತಿಸಿದ್ದಲ್ಲಿ, ನೀವು ಶೇರ್ ಮಾರುಕಟ್ಟೆಯಲ್ಲಿ ಹೆಚ್ಚು ಹಣ ಗಳಿಸಬಹುದು.
ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

