ಮಕ್ಕಳಿಗೆ ನ್ಯುಮೋನಿಯಾ ಬರಲು ಕಾರಣವೇನು..?

Health Tips: ಇತ್ತೀಚಿನ ದಿನಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿಗೂ ನ್ಯುಮೋನಿಯಾ ಬರುತ್ತಿದೆ. ಈ ರೋಗದ ಲಕ್ಷಣ ಅಂದ್ರೆ ಶ್ವಾಸಕೋಶದ ಸಮಸ್ಯೆ. ಶ್ವಾಸಕೋಶದಲ್ಲಿ ಆಗುವ ಇನ್‌ಫೆಕ್ಷನ್‌ನಿಂದ ಆರೋಗ್ಯ ಹದಗೆಡುತ್ತದೆ. ಕಫ ಕಟ್ಟುತ್ತದೆ. ಉಸಿರಾಡಲು ಕಷ್ಟವಾಗುತ್ತದೆ. ಇವಿಷ್ಟು ನ್ಯುಮೋನಿಯಾ ರೋಗದ ಲಕ್ಷಣ. ಇದು ಯಾಕೆ ಹೆಚ್ಚಾಗಿ ಮಕ್ಕಳಿಗೆ ಬರುತ್ತದೆ ಎಂಬ ಬಗ್ಗೆ ಮಕ್ಕಳ ತಜ್ಞರಾದ ಡಾ. ಸುರೇಂದ್ರ ಮಾತನಾಡಿದ್ದಾರೆ. ಮಕ್ಕಳಿಗೆ ಶೀತ ನೆಗಡಿಯಾದಾಗ, ಬೇಗ ಚಿಕಿತ್ಸೆ ಕೊಡಿಸಬೇಕು. ಮಗುವಿಗೆ ಸರಿಯಾದ ಚಿಕಿತ್ಸೆ ಸಿಗದಿದ್ದಲ್ಲಿ, ಆ ಜ್ವರ ನ್ಯುಮೋನಿಯಾ ಆಗಿ ಬದಲಾಗುತ್ತದೆ. … Continue reading ಮಕ್ಕಳಿಗೆ ನ್ಯುಮೋನಿಯಾ ಬರಲು ಕಾರಣವೇನು..?