Friday, November 14, 2025

Latest Posts

ನಟ ದರ್ಶನ್‌ಗೂ ಪವಿತ್ರಾ ಗೌಡಗೂ ಏನು ಸಂಬಂಧ?

- Advertisement -

ಸುಪ್ರೀಂಕೋರ್ಟ್‌ನಲ್ಲಿಂದು ಒಂದೂವರೆ ಗಂಟೆಗೂ ಅಧಿಕ ಕಾಲ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ವಾದ-ಪ್ರತಿವಾದ ಆಲಿಸಿದ ಸುಪ್ರಿಂ, 100ಕ್ಕೂ ಅಧಿಕ ಪ್ರಶ್ನೆಗಳನ್ನು ವಕೀಲರ ಮುಂದಿಟ್ಟಿತ್ತು. ರಾಜ್ಯ ಸರ್ಕಾರ ಮತ್ತು ದರ್ಶನ್‌ಗಷ್ಟೇ ಅಲ್ಲ.. ಪವಿತ್ರಾ ಗೌಡಗೂ ಖಡಕ್‌ ಪ್ರಶ್ನೆಗಳನ್ನೇ ಕೇಳಿದೆ.

ಇದಕ್ಕೆಲ್ಲಾ ನೀವೇ ಕಾರಣ – ಸುಪ್ರೀಂ

ನೀವಿಲ್ಲದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಇದಕ್ಕೆಲ್ಲಾ ನೀವೇ ಕಾರಣ ಅಂತಾ, ಪ್ರವಿತ್ರಾ ಬಗ್ಗೆ ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ.. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ, ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ಪವಿತ್ರಾ ಗೌಡಗೆ ಸಂಬಂಧಿಸಿದ 9 ಪ್ರಶ್ನೆಗಳನ್ನು ಸುಪ್ರೀಂಕೋರ್ಟ್‌ ಕೇಳಿದೆ.

ಪವಿತ್ರಾಗೌಡಗೆ ಸುಪ್ರೀಂಕೋರ್ಟ್ 9 ಪ್ರಶ್ನೆಗಳು!!

1. ದರ್ಶನ್‌, ಪವಿತ್ರಾ ಗೌಡ ನಡುವಿನ ಸಂಬಂಧವೇನು?
2. ಪವಿತ್ರಾ-ದರ್ಶನ್‌ ಸಂಬಂಧದ ಬಗ್ಗೆ ವಿವರಿಸಿ?
3. ಪವಿತ್ರಾ ಗೌಡಗೆ ವಯಸ್ಸೆಷ್ಟು?
4. ಮೊದಲ ಪತಿಯೊಂದಿಗೆ ವಿಚ್ಛೇದನ ಆಗಿದೆಯಾ?
5. ದರ್ಶನ್‌ ಭೇಟಿಗೂ ಮುನ್ನ ಅವರ ಹಿನ್ನೆಲೆ ಏನು?
6. A3 ಪವನ್‌ಗೆ ಪವಿತ್ರಾ 55 ಬಾರಿ ಕರೆ ಮಾಡಿದ್ದೇಕೆ?
7. ಕೊಲೆ ಕೇಸಲ್ಲಿ ಅವರ ಪಾತ್ರವಿದ್ಯಾ?
8. ಪ್ರಕರಣದಲ್ಲಿ ಪವಿತ್ರಾ ಪಾತ್ರ ಎಲ್ಲಿ ಬರುತ್ತೆ?
9. ಹಲ್ಲೆ ವೇಳೆ ಪವಿತ್ರಾ ಗೌಡ ಏನು ಮಾಡ್ತಿದ್ರು? 

ಹೀಗಂತ ಸುಪ್ರೀಂ ನ್ಯಾಯಮೂರ್ತಿಗಳು ಇವತ್ತು ಪವಿತ್ರಾ ಗೌಡ ಜಾತಕವನ್ನೇ ಜಾಲಾಡಿದೆ. ಪವಿತ್ರಾ ಗೌಡ ಪರ ವಕೀಲೆ ವಾದ ಮಂಡನೆ ವೇಳೆ, ಪವಿತ್ರಾ ಸ್ನೇಹಿತೆ ಸಮಂತಾ, ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಆಕೆ ನಟಿ ಹಾಗೂ ಒಂದು ಮಗುವಿನ ತಾಯಿ. ಚಪ್ಪಲಿಯಿಂದ ಹೊಡೆದಿದ್ದಾರೆ ಅನ್ನೋ ಒಂದು ಹೇಳಿಕೆ ಇದೆ. ಒಂದೇ ಒಂದು ಗಾಯವೂ ಪವಿತ್ರಾ ಗೌಡರಿಂದ ಆಗಿಲ್ಲ ಅಂತಾ, ಸುಪ್ರೀಂ ಮುಂದೆ ಉತ್ತರಿಸಿದ್ದಾರೆ.

ಕೊಲೆ ಕೇಸ್‌ ವಿಚಾರಣೆಯಲ್ಲಿ ಈ ಹಿಂದೆ, ಪವಿತ್ರಾ ಗೌಡ ಜೊತೆ ನಂಟಿನ ಬಗ್ಗೆ ದರ್ಶನ್ ಹೇಳಿಕೆ ಕೊಟ್ಟಿದ್ದಾರೆ. ದರ್ಶನ್-ಪವಿತ್ರಾ ಲೀವ್‌ ಇನ್‌ ರಿಲೇಶನ್‌ನಲ್ಲಿ ಇದ್ದಾರಂತೆ. ಪವಿತ್ರಾರನ್ನು ಮದುವೆಯಾಗಿಲ್ಲ ಅಂತಾ ದರ್ಶನ್‌ ಹೇಳಿದ್ದಾರೆ. ಕೊಲೆ ಕೇಸ್‌ ಉರುಳು ಡೈರೆಕ್ಟ್‌ ಆಗಿ, ಪವಿತ್ರಾ ಗೌಡ ಕೊರಳಿಗೆ ಸುತ್ತಿಕೊಂಡಿದೆ.

- Advertisement -

Latest Posts

Don't Miss