- Advertisement -
ಬಾಲಿವುಡ್ ನಟ ಅನಿಲ್ ಕಪೂರ್ ಕನ್ನಡ ಸೂಪರ್ ಹಿಟ್ ಸಾಂಗ್ವೊಂದನ್ನ ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ. ವಿಶೇಷ ಅಂದ್ರೆ ಅದು ಅವರು ಅಭಿನಯಿಸಿರೋ ಕನ್ನಡ ಸಿನಿಮಾ ಪಲ್ಲವಿ-ಅನುಪಲ್ಲವಿ ಚಿತ್ರದ ನಗುವ ನಯನ ಹಾಡನ್ನ. ಇತ್ತೀಚೆಗೆ ಬೆಂಗಳೂರಿನ ಗಣೇಶ ಉತ್ಸವಕ್ಕೆ ಅನಿಲ್ ಕಪೂರ್ ವಿಶೇಷ ಅತಿಥಿಯಾಗಿ ಆಗಮಿಸಿದ್ರು. ಈ ಸಮಯದಲ್ಲಿ ವಿಜಯ್ ಪ್ರಸಾದ್ ಮತ್ತು ಅನುರಾಧ ಭಟ್ ಜೊತೆಗೆ ನಗುವ ನಯನ ಹಾಡನ್ನ ಹಾಡಿ ಎಲ್ಲರ ಮನ ಗೆದ್ದಿದ್ದಾರೆ. ಸದ್ಯ ಅನಿಲ್ ಕಪೂರ್ ಹಾಡು ಹಾಡಿರೋ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
- Advertisement -