ಕ್ರೀಡೆ : ವಿಶ್ವದಾದ್ಯಂತ ಈಗ ವಿಶ್ವಕಪ್ ಕಲರವ. ಕ್ರಿಕೆಟ್ ಅಭಿಮಾನಿಗಳಿಗಂತೂ ಹಬ್ಬವೋ ಹಬ್ಬ. ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹತ್ತು ತಂಡಗಳು ಸೆಣಸುತ್ತಿದ್ದು, ದಿನಕಳೆದಂತೆ ಟೂರ್ನಿ ರೋಚಕ ಘಟ್ಟ ತಲುಪುತ್ತಿದೆ. ಸದ್ಯ ವಿಶ್ವಕಪ್ ಗೆಲ್ಲೋದ್ಯಾರು ಅನ್ನೋ ಚರ್ಚೆಯ ಜೊತೆಗೆ ಆಟಗಾರರ ಲುಕ್ ಮತ್ತು ಸ್ಟೈಲ್ ಗಳ ಬಗ್ಗೆಯೂ ಚರ್ಚೆ ಶುರುವಾಗಿದೆ. ಅದರಲ್ಲೂ ಭಾರತೀಯ ಕ್ರಿಕೆಟಿಗರಿಗಂತೂ ವಿಶ್ವದಾದ್ಯಂತ ಫ್ಯಾನ್ಸ್ ಇದ್ದಾರೆ. ಈ ನಡುವೆ ಭಾರತ ಆಟಗಾರರ ಹೆರ್ ಸ್ಟೈಲ್ ಕುರಿತಂತೆ ಚರ್ಚೆ ಜೊರಾಗಿದೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇರಿದಂತೆ, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಆಲ್ ರೌಂಡರ್ ಹಾರ್ದಿಕ ಪಾಂಡ್ಯ ಸ್ಪಿನ್ನರ್ ಯಜುವೇಂದ್ರ ಚಹಲ್ ಹೇರ್ ಸ್ಟೈಲ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಗಳು ಜೋರಾಗಿವೆ.
ಸದ್ಯ ಈ ನಾಲ್ವರ ಫೋಟೋಗಳನ್ನ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಬಿಸಿಸಿಐ, who’s haircut is the coolest..? ಅಂತ ಕ್ರಿಕೆಟ್ ಅಭಿಮಾನಿಗಳಿಗೆ ಪ್ರಶ್ನೆ ಮಾಡಿದೆ. ಸದ್ಯ ಚಿತ್ರ ನೋಡಿದ ಅಭಿಮಾನಿಗಳು, ತಮ್ನ ಆಯ್ಕೆಯನ್ನ ಕಾಮೆಂಟ್ ಮಾಡುತ್ತಿದ್ದು, ಬಹುತೇಕರು ಧೋನಿಯನ್ನ ಆಯ್ಕೆ ಮಾಡಿದ್ದಾರೆ. ಅಷ್ಟಕ್ಕೂ ಹೇರ್ ಸ್ಟೈಲ್ ಕ್ರೇಜ್ ಧೋನಿಗೆ ಇಂದು ನಿನ್ನೆಯದಲ್ಲ. ಟೀಮ್ ಇಂಡಿಯಾಕ್ಕೆ ಎಂಟ್ರಿಯಾದ ದಿನಗಳಲ್ಲಿ ಉದ್ದದ ಕೂದಲು ಬಿಟ್ಟಿದ್ದ ಧೋನಿಯ ಸ್ಟೈಲ್ ಗೆ ಫಿದಾ ಆಗದವರೇ ಇಲ್ಲ. ಅಂದು ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಪರ್ವೇಜ್ ಮುಶ್ರಫ್ ಕೂಡ ಧೋನಿ ಹೇರ್ ಸ್ಟೈಲ್ ಗೆ ಫಿದಾ ಆಗಿದ್ರು. ನಂತರದ ದಿನಗಳಲ್ಲಿ ಹಲವಾರು ವಿಭಿನ್ನ ಗೆಟಪ್ ನಲ್ಲಿ ಮೈದಾನದಲ್ಲಿ ಮಿಂಚಿದ್ದ ಮಾಹಿ, ಈಗ coolest ಹೇರ್ ಕಟ್ ನಲ್ಲಿ ಮಿಂಚುತ್ತಿದ್ದಾರೆ.
ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ
ಪಾಕಿಸ್ತಾನ ಕ್ಯಾಪ್ಟನ್ ಎಚ್ಚರಿಕೆ – ಸುದ್ದಿ ನೋಡಲು ಇದರ ಮೇಲೆ ಕ್ಲಿಕ್ ಮಾಡಿ