Sunday, March 3, 2024

Latest Posts

ಕುಮಾರಸ್ವಾಮಿ ಮಾಡ್ತಿರೋದು ಗ್ರಾಮ ವಾಸ್ತವ್ಯ ಅಲ್ಲ – ಹೆಚ್.ಡಿ.ಡಿ

- Advertisement -

ಬೆಂಗಳೂರು : ಸಿಎಂ ಕುಮಾರಸ್ವಾಮಿ ಅವರು ಒಂದು ವರ್ಷದ ತಾಜ್ ವೆಸ್ಟ್ ಹೋಟೆಲ್ ವಾಸ್ತವ್ಯ ಬದಲಾಯಿಸಿದ ಮೇಲೆ ಗ್ರಾಮ ವಾಸ್ತವ್ಯ ಮಾಡಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.. ಆದ್ರೆ ಇದು ಗ್ರಾಮ ವಾಸ್ತವ್ಯ ಅಲ್ಲ, ಅದನ್ನ ಹಾಗೆ ಕರೀಬೇಡಿ ಅಂತ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

ಹಾಗಾದ್ರೆ ಕುಮಾರಸ್ವಾಮಿ ಮಾಡಲು ಹೊರಟಿರೋದೇನು..?

ಇನ್ನು ಮಾಧ್ಯಮಗಳು ಕುಮಾರಸ್ವಾಮಿದು ಬರೀ ಗ್ರಾಮ ವಾಸ್ತವ್ಯ ಅಂತ ಬಿಂಬಿಸ್ತಿದ್ದಾರೆ. ಅದು ಗ್ರಾಮ ವಾಸ್ತವ್ಯ ಅಲ್ಲ ಅದು ಗ್ರಾಮ ಅಭಿವೃದ್ಧಿಯ ಹೆಜ್ಜೆ ಅಂತ ಪುತ್ರನ ನಡೆಗೆ ದೇವೇಗೌಡ ಹೊಸ ವ್ಯಾಖ್ಯಾನ ಮಾಡಿದ್ದಾರೆ. ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಶಾಲೆಯಲ್ಲಿ ಉಳಿಯುವ ಕುಮಾರಸ್ವಾಮಿ ಊರಿನ ಸಮಸ್ಯೆ ಪರಿಹಾರ ಮಾಡ್ತಾರೆ. ಸಂಜೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡ್ತಾರೆ. ಮಕ್ಕಳ ಜೊತೆ ಮುಖ್ಯಮಂತ್ರಿ ಬೆರೆಯುವುದರ ಜೊತೆ ಊರ ಉದ್ಧಾರದ ಕಲ್ಪನೆಯ ಕಾರ್ಯಕ್ರಮ ಇದು ಅಂತ ಮಾಜಿ ಪ್ರಧಾನಿ ಹೇಳಿದ್ದಾರೆ.

ಸಾಲಮನ್ನಾ ತಡವಾಗಿದ್ದು ಏಕೆ..? ಇಲ್ಲಿದೆ ನೋಡಿ ಕಾರಣ

- Advertisement -

Latest Posts

Don't Miss