ಕ್ರೀಡೆ : ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಕೊಹ್ಲಿ ಪಡೆ, ಮುಂದಿನ ಹಣಾಹಣಿಗೆ ಸಜ್ಜಾಗುತ್ತಿದೆ. ಕಳೆದ ಬಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಬ್ಲೂ ಬಾಯ್ಸ್, ಬಿಡುವಿನ ಅವಧಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ರು. ಮೈದಾನದಲ್ಲಿ ಸದಾ ಎದುರಾಳಿ ವಿರುದ್ಧ ಗೆಲುವು ದಾಖಲಿಸುವ ಒತ್ತಡದಲ್ಲೇ ಕಣಕ್ಕಿಳಿಯುವ ಟೀಮ್ ಇಂಡಿಯಾ ಪ್ಲೇಯರ್ಸ್, ನಿನ್ನೆ ಯಾವುದೇ ಒತ್ತಡವಿಲ್ಲದೆ ಕ್ರಿಕೆಟ್ ಆಡಿ ಖುಷಿ ಪಟ್ರು. ಹೌದು ಕಳೆದ ನಾಲ್ಕು ದಿನಗಳಿಂದ ಬಿಡುವಿನಲ್ಲಿರುವ ಕೊಹ್ಲಿ ಬಾಯ್ಸ್, ಮಕ್ಕಳೊಂದಿಗೆ ಮೈದಾನದಲ್ಲಿ ಕ್ರಿಕೆಟ್ ಆಡಿ ಸಖತ್ ಎಂಜಾಯ್ ಮಾಡಿದ್ರು..
ಸದ್ಯ ಈ ಖುಷಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕ್ಯಾಪ್ಟನ್ ಕೊಹ್ಲಿ, ಮಕ್ಕಳೊಂದಿಗಿನ ಆಟ ಖುಷಿ ನೀಡಿತು. ಅಷ್ಟೇ ಅಲ್ಲದೇ ಬಾಲ್ಯದ ದಿನಗಳನ್ನ ನೆನಪಿಸಿತು. ಜೊತೆಗೆ ಮಕ್ಕಳಿಂದ ಸಾಕಷ್ಟು ಕಲಿತೆ ಅಂತ ಬರೆದು ಕೊಂಡಿದ್ದಾರೆ. ಇನ್ನೂ ಈ ಖುಷಿ ಯನ್ನ ಹಂಚಿಕಂಡಿರುವ ಕನ್ನಡಿಗ ಕೆ ಎಲ್ ರಾಹುಲ್ “ಬೇಬಿಸ್ ಡೇ ಔಟ್ ಅಂತ ಬರೆದು ಕೊಂಡಿದ್ದಾರೆ.
ವೀಕ್ಷಕರೆ ಅದೇನೇ ಇರಲಿ ಬ್ಯಾಕ್ ಟು ಬ್ಯಾಕ್ ಮೂರು ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ನಾಳೆ ಅಫ್ಘಾನಿಸ್ಥಾನ ವಿರುದ್ಧ ತನ್ನ ಐದನೇ ಪಂದ್ಯವನ್ನಾಡುತ್ತಿದೆ. ವಿಶ್ವಕಪ್ ನ ಒತ್ತಡದ ಪಂದ್ಯಗಳ ನಡುವೆ ಕೊಹ್ಲಿ ಪಡೆ, ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಖುಷಿ ಪಟ್ಟಿದೆ..