ನಾಳೆ ಯಾರಾದ್ರೂ ಆಸ್ಪತ್ರೆಗೆ ಹೋಗ್ಬೇಕು ಅಂತಿದ್ರೆ ಹೋಗದಿರುವುದು ವಾಸಿ, ತೀರ ಎಮರ್ಜೆನ್ಸಿ ಅನ್ಸಿದ್ರೆ ಚಿಕಿತ್ಸೆ ಸಿಗುತ್ತೆ. ಅದನ್ನ ಹೊರತುಪಡಿಸಿದ್ರೆ ದೇಶದ ಯಾವುದೇ ಆಸ್ಪತ್ರೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಚಿಕಿತ್ಸೆ ಸಿಗಲ್ಲ.. ಯಾಕಂದ್ರೆ ನಾಳೆ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ.
ವೈದ್ಯರು ಪ್ರತಿಭಟನೆ ಮಾಡ್ತಿರೋದು ಯಾಕೆ..?
ವೈದ್ಯರ ಮೇಲಿನ ಹಲ್ಲೆಗೈದವರಿಗೆ ಕಠಿಣ ಶಿಕ್ಷೆಯಾಗಬೇಕು, ಈಗಿರುವ ಕಾನೂನನ್ನ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕು. ಜೊತೆಗೆ ಶಿಕ್ಷೆ ಪ್ರಮಾಣ ಮತ್ತಷ್ಟು ಹೆಚ್ಚಿಸಬೇಕು ಎಂದು ಈ ಪ್ರಮುಖ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವೈದ್ಯರು ಕಪ್ಪು ಪಟ್ಟಿ ಧರಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಇಂದು ಕಲಬುರಗಿಯಲ್ಲಿ ರಾಜ್ಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಅನ್ನದಾನಿ ಮೇಟಿ ಹೇಳಿಕೆ ನೀಡಿದ್ದಾರೆ.
ಪ್ರತಿಭಟನೆ ಮಾಡದಂತೆ ಸರ್ಕಾರ ಮನವಿ
ಇನ್ನು ನಿಮ್ಮೆಲೆ ಬೇಡಿಕೆ ಬಗ್ಗೆ ಚರ್ಚೆ ಮಾಡಲು ಸಿದ್ಧರಿದ್ದೇವೆ. ಪ್ರತಿಭಟನೆ ಕೈಬಿಡಿ ಅಂತ ಸರ್ಕಾರ ಹೇಳಿದ್ರು ವೈದ್ಯಕೀಯ ಸಂಘ ಮಾತ್ರ ಪ್ರತಿಭಟನೆ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಒಟ್ಟಾರೆ ನಾಳೆ ಯಾರಾದ್ರೂ ಆಸ್ಪತ್ರೆ ಕಡೆ ಜನರಲ್ ಚೆಕಪ್ ಹೋಗದೆ ಮುಂದೂಡುವುದು ಉತ್ತಮ. ತುರ್ತು ಚಿಕಿತ್ಸೆಗೆ ಯಾವುದೇ ಅಡೆತಡೆ ಇಲ್ಲ ಹೀಗಾಗಿ ಹೆಚ್ಚು ಸಮಸ್ಯೆ ಆಗುವ ಸಾಧ್ಯತೆ ಇಲ್ಲ..
ತಿರುಪತಿಗೆ ಹೋದ್ರೆ ತಪ್ಪದೇ ಈ ಅದ್ಭುತ ನೋಡಿ.