Saturday, July 27, 2024

Latest Posts

ವಿರಾಟ್ ವಿಜಯ ಯಾತ್ರೆಗೆ ಬೀಳುತ್ತಾ ಬ್ರೇಕ್..?

- Advertisement -

ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಪಡೆಯ ಆರ್ಭಟ ಜೋರಾಗಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನದಂತಹ ಬಲಿಷ್ಠ ತಂಡಗಳ ಎದುರು ಭರ್ಜರಿ ಗೆಲುವು ದಾಖಲಿಸಿದ್ದ ತಂಡ, ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಪ್ರಯಾಸದ ಗೆಲುವು ದಾಖಲಿಸಿತು. ಈ ಮೂಲಕ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಪಡೆ ಅಜೇಯವಾಗಿದೆ. ಸದ್ಯ ಭಾರತದ ವಿಜಯದ ಯಾತ್ರೆಗೆ ಬ್ರೇಕ್ ಹಾಕುವುದಕ್ಕೆ ಕೆರಿಬಿಯನ್ ದೈತ್ಯ ಪಡೆ ಸಜ್ಜಾಗಿದೆ.

ಹೌದು, ವಿಶ್ವಕಪ್ ಟೂರ್ನಿಯ 6ನೇ ಪಂದ್ಯವನ್ನಾಡುತ್ತಿರುವ ಭಾರತ, ಇಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುತ್ತಿದೆ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಫಾರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು, ಗೆಲುವಿನ ಜೊತೆಗೆ ಹಲವು ದಾಖಲೆಗಳನ್ನ ಬರೆಯುವುದಕ್ಕೆ ಸಜ್ಜಾಗಿದ್ದಾರೆ. ಇಂದು ಕೊಹ್ಲಿ ಕೇವಲ 37 ರನ್ ಗಳಿಸಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20 ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಲಿದ್ದಾರೆ. ಇನ್ನು ಇಂದಿನ ಪಂದ್ಯ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಗೆ 50ನೇ ಏಕದಿನ ಪಂದ್ಯ, ಅಷ್ಟೇ ಅಲ್ಲದೇ ಎರಡು ವಿಕೆಟ್ ಪಡೆದಲ್ಲಿ ಏಕದಿನ ಕ್ರಿಕೆಟ್ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. ಇನ್ನೂ ಟೀಮ್ ಇಂಡಿಯಾದ ಚೈನಾಮನ ಬೌಲರ್ ಕುಲ್ ದೀಪ್ ಯಾದವ್, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 149 ವಿಕೆಟ್ ಪಡೆದಿದ್ದು 150 ವಿಕೆಟ್ ಸಾಧನೆ ಪೂರೈಕೆ ಗೆ ಒಂದು ವಿಕೆಟ್ ಬೇಕಾಗಿದೆ. ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 91ರನ್ ಗಳಿಸಿದ್ರೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 17 ಸಾವಿರ ರನ್ ಪೂರೈಸಲಿದ್ದಾರೆ. ಅಷ್ಟೇ ಅಲ್ಲದೆ ಒಂದು ಸ್ಟಂಪ್ ಮಾಡಿದಲ್ಲಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿದ 2ನೇ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ.

ಇನ್ನೂ ಉಭಯ ತಂಡಗಳು ಇದುವರೆಗೂ ಇಂಗ್ಲೆಂಡ್ ನಲ್ಲಿ 5 ಬಾರಿ ಎದುರಾಗಿದ್ದು 3 ರಲ್ಲಿ ಭಾರತ 2 ರಲ್ಲಿ ವಿಂಡೀಸ್ ಗೆಲುವು ದಾಖಲಿಸಿದೆ. ವಿಶ್ವಕಪ್ ಇತಿಹಾಸ ದಲ್ಲಿ ಎರಡೂ ತಂಡಗಳು ಒಟ್ಟು 8 ಬಾರಿ ಮುಖಾಮುಖಿಯಾಗಿದ್ದು 5 ರಲ್ಲಿ ಭಾರತ ಮತ್ತು 3ರಲ್ಲಿ ವೆಸ್ಟ್ ಇಂಡೀಸ್ ಗೆಲುವು ದಾಖಲಿಸಿದೆ. ಒಟ್ಟಾರೆ ಈ ಬಾರಿಯ ವಿಶ್ವಕಪ್ ನಲ್ಲಿ ಉಭಯ ತಂಡಗಳ ಸಾಧನೆ ನೋಡುವುದಾದರೆ, ಆಡಿದ ಎಲ್ಲಾ ಪಂದ್ಯಗಳಲ್ಲೂ ಭಾರತ ಗೆಲುವು ದಾಖಲಿಸಿದೆ. 5 ರಲ್ಲಿ 4ಗೆಲುವು ಗಳೊಂದಿಗೆ 9 ಪಾಯಿಂಟ್ ಗಳಿಸಿದೆ. ಇನ್ನೂ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ದಾಖಲಿಸಿರುವ ವಿಂಡೀಸ್, ತನ್ನ ಖಾತೆಯಲ್ಲಿ 3 ಪಾಯಿಂಟ್ ಮಾತ್ರ ಹೊಂದಿದ್ದು, ಸೆಮಿಫೈನಲ್ ತಲುಪಬೇಕಾದರೆ ಮುಂದಿನ ಪ್ರತಿ ಪಂದ್ಯದಲ್ಲೂ ಗೆಲುವು ಸಾಧಿಸಬೇಕಾದ ಒತ್ತಡದಲ್ಲಿದೆ.

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

ವಿರಾಟ್ ವಿಜಯ ಯಾತ್ರೆಗೆ ಬೀಳುತ್ತಾ ಬ್ರೇಕ್..?

- Advertisement -

Latest Posts

Don't Miss