Saturday, October 12, 2024

Latest Posts

ಸಿಎಂಗೆ ಆಪರೇಷನ್ ಭಯ ನಿಜವಾಗಿಯೂ ಆಪರೇಷನ್ ನಡೀತಿದೆಯಾ..?

- Advertisement -

ಬೆಂಗಳೂರು : ಕಳೆದೊಂದು ವರ್ಷದಲ್ಲಿ ಜನರಿಗೆ ಅಸಹ್ಯವಾಗಿರುವ ಪದ ಅಂದ್ರೆ ಆಪರೇಷನ್.. ಯಾಕಂದ್ರೆ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ.. ಆಪರೇಷನ್ ಕಮಲ ಮಾಡ್ಬಿಟ್ರು.. ಹೀಗೆ ಪದೇ ಪದೇ ಕೇಳಿ ಜನ ಸಾಕಾಗಿ ಹೋಗಿದ್ದಾರೆ.. ಲೋಕಸಭಾ ಫಲಿತಾಂಶಧ ನಂತರ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಟೀಂಗೆ ಯಾಔಉದೇ ಆಪರೇಷನ್ ಮಾಡಬೇಡಿ ಸರ್ಕಾರ ಅದೇ ಬಿದ್ದರೇ ಬೀಳಲಿ ಅಂತ ಆದೇಶ ರವಾನಿಸಿದ್ದಾರೆ ಅಂತ ಸ್ವತಃ ಬಿಜೆಪಿ ನಾಐಕರೇ ಹೇಳಿದ್ದಾರೆ.. ಆದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆಫರೇಷನ್ ಭಯ ದೂರವಾಗಿಲ್ಲ.. ಸಿಎಂ ಎರಡು ತಿಂಗಳು- ಮೂರು ತಿಂಗಳಿಗೊಮ್ಮೆ ಆಪರೇಷನ್ ಆಗ್ತಿದೆ ಅಂತ ಬಾಂಬ್ ಹಾಕ್ತಾನೆ ಇದ್ದಾರೆ.. ಆದ್ರೆ ಇದು ವರೆಗೂ ಆಪರೇಷನ್ ಕಮಲ ಸಕ್ಸಸ್ ಆಗಿಲ್ಲ..

ಬಿಜೆಪಿ ನಾಯಕರು ಸುಮ್ಮನಿದ್ದಾರಾ..?

ಮೇ 23ರ ಫಲಿತಾಂಶ ಬಂದ್ಮೇಲೆ ಒಂದು ಕ್ಷಣವೂ ದೋಸ್ತಿ ಸರ್ಕಾರ ಅಧಿಕಾರದಲ್ಲಿ ಇರಲ್ಲ ಅಂತ ಹಲವು ಬಿಜೆಪಿ ನಾಯಕರು ಈ ಮೊದಲು ಹೇಳಿದ್ರು.. ಕಾಂಗ್ರೆಸ್ ನಾಯಕರು ಅವರ ಆಪ್ತರ ಬಳಿ ಸಹ ಫಲಿತಾಂಶ ಬಿಜೆಪಿ ಪರವಾಗಿ ಬಂದರೆ ದೋಸ್ತಿ ಸರ್ಕಾರ ಇರೋದಿಲ್ಲ ಅಂತ ಹೇಳಿದರು.. ಇನ್ನು ಜೆಡಿಎಸ್ ನಾಯಕರು ಸಹ ಫಲಿತಾಂಶದ ನಂತರ ರಾಜಕೀಯ ಬಿರುಗಾಳಿ ಬೀಸುತ್ತೆ ಅಂತ ಹೇಳಿದ್ರು.. ಆದ್ರೆ ಬಿಜೆಪಿ ಭಾರೀ ಬಹುಮತದಲ್ಲಿ ಅಧಿಕಾರಕ್ಕೆ ಬಂದ್ರು ದೋಸ್ತಿ ಸರ್ಕಾರವನ್ನ ಏನೂ ಮಾಡಲು ಆಗಿಲ್ಲ.. ಸಂಪುಟ ವಿಸ್ತರಣೆ ಮಾಡಿದ್ರೆ ಸರ್ಕಾಋ ಬೀಳುತ್ತೆ ಅಂತ ಹೇಳಿದ್ರು ಆದ್ರೆ ಅದು ಸಾಧ್ಯವಾಗಿಲ್ಲ.. ಯಡಿಯೂರಪ್ಪ ಟೀಂ ಮಾತ್ರ ಕುಮಾರಸ್ವಾಮಿ ಹೇಳುವಂತೆ ಸುಮ್ಮನೆ ಕೂತಿಲ್ಲ.. ಸರಿಸುಮಾರು ಕಾಂಗ್ರೆಸ್ ಹಾಗೂ ಜೆಡಿಎಸ್ನ 20 ಶಾಸಕರಿಗೆ ಬಲೆ ಬೀಸಿ ಕೂತಿದ್ದಾರೆ.. ಕಾಂಗ್ರೆಸ್ನ ಬಹುತೇಕ ಅತೃಪ್ತ ಶಾಸಕರು ಬಿಜೆಪಿ ಬಾಗಿಲಲ್ಲಿ ನಿಂತಿದ್ದಾರೆ.. ಆದ್ರೆ ಪಾರ್ಲಿಮೆಂಟ್ ಸೆಷನ್ ಮುಗಿಯೋ ವರೆಗೂ ಬಿಜೆಪಿ ನಾಯಕರು ಸುಮ್ಮನೆ ಇರುವಂತೆ ಭಿನ್ನಮತೀಯರಿಗೆ ಸೂಚನೆ ಕೊಟ್ಟಿದ್ದಾರೆ.. ಆದ್ರೆ, ಒಳಗೊಳಗೆ ಕಾಂಗ್ರೆಸ್, ಜೆಡಿಎಸ್ ಅತೃಪ್ತ ಶಾಸಕರ ಜೊತೆ ಸಭೆ ನಡೀತಾನೆ ಇದೆ.. ಜುಲೈ 26ರ ನಂತರ ರಾಜ್ಯದಲ್ಲಿ ದೋಸ್ತಿ ಪಕ್ಷದ ಅತೃಪ್ತರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಸರ್ಕಾರ ಬೀಳಿಸುವ ಪ್ರಯತ್ನದಲ್ಲಿರೋದು 100ಕ್ಕೆ ನೂರರಷ್ಟು ಸತ್ಯವಂತೆ.. ಇದನ್ನ ಸ್ವತಃ ಕಾಂಗ್ರೆಸ್ ನಾಯಕರ ವಲಯದಲ್ಲೇ ಚರ್ಚೆಯಾಘ್ತಿದೆ.. ಆದ್ರೆ, 10ಕ್ಕೂ ಹೆಚ್ಚು ಬಾರಿ ಆಪರೇಷನ್ ಠೂಸ್ ಪಟಾಕಿ ಆಗಿರೋದು ಯಾರನ್ನ ನಂಬಂದಂತಹ ಸ್ಥಿತಿಗೆ ತಂದು ನಿಲ್ಲಿಸಿದೆ..

ಯಸ್ ವೀಕ್ಷಕರೇ ಬಿಜೆಪಿ ಆಪರೇಷನ್ ಕಮಲ ಮಾಡ್ತಿದೆಯಾ..? ಅಥವಾ ಕುಮಾರಸ್ವಾಮಿ ಆಪರೇಷನ್ ಆಗ್ತಿದೆ ಅನ್ನೋ ಭ್ರಮೆಯಲ್ಲಿ ಇದ್ದಾರಾ..? ಎಲ್ಲಕ್ಕಿಂತ ಹೆಚ್ಚಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಆಡಳಿತ ನಿಮಗೆ ತೃಪ್ತಿ ನೀಡಿದೆಯಾ..? ಈ ಬಗ್ಗೆ ಕಾಮೆಂಟ್ ಮಾಡಿ..

BTv ಕನ್ನಡ VS ಸುಮಲತಾ ಅಂಬರೀಶ್

- Advertisement -

Latest Posts

Don't Miss