Thursday, October 10, 2024

Latest Posts

ಸೆನ್ಸೇಷನಲ್ ಬ್ಯೂಟಿಗೆ ಹುಡುಗ್ರು ಫುಲ್ ಫಿದಾ- ಯಾರೀ ಚೆಂದುಳ್ಳಿ ಚೆಲುವೆ?

- Advertisement -

ಬೆಂಗಳೂರು: ಸೋಷಿಯಲ್ ಮೀಡಿಯಾ ಅಂದ್ರೇನೆ ಹಾಗೇ ರಾತ್ರೋ ರಾತ್ರಿ ಎಂಥಾವ್ರನ್ನೂ ಫೇಮಸ್​ ಮಾಡಿಬಿಡುತ್ತೆ. ಐಪಿಎಲ್​ನ ಆರ್​ಸಿಬಿ ತಂಡದ ಈ ಫ್ಯಾನ್​ ಒಂದೇ ರಾತ್ರಿಯಲ್ಲಿ ಫುಲ್ ಫೇಮಸ್ ಆಗಿಬಿಟ್ಟಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಂತೂ ಈ ಹುಡಿಗಿಯದ್ದೇ ಹವಾ. ಯುವಕರ ಫೋನ್ ಗ್ಯಾಲರಿ ತುಂಬಾ ಈ ಸುಂದರಿಯದ್ದೇ ಫೋಟೋಸ್​. ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ- ಸನ್​ರೈಸರ್ಸ ನಡುವಿನ ಪಂದ್ಯದ ವೇಳೆ ಯಾವಾಗ ಈ ಹುಡುಗಿ ಕ್ಯಾಮರಾಮನ್​ ಕಣ್ಣಿಗೆ ಬಿದ್ದಳೋ ಮುಗಿಯಿತು ನೋಡಿ ಮುಂದೆ ಪವಾಡವೇ ನಡೆದು ಹೋಯ್ತು.

ಯೆಸ್, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆರ್ ಸಿಬಿ ಅಭಿಮಾನಿ ದೀಪಿಕಾ ಘೋಷ್… ಆರ್​ಸಿಬಿ ರನ್ ಬಾರಿಸಿದಾಗಲೆಲ್ಲಾ ಸಖತ್ ಚಿಯರ್ ಮಾಡ್ತಿದ್ರು.. ಈ ವೇಳೆ ಕ್ಯಾಮರಾ ಮ್ಯಾನ್ ತನ್ನ ಕ್ಯಾಮರವನ್ನ ಈ ಹುಡುಗಿಯ ಕಡೆ ತಿರುಗಿಸಿದ್ದೇ ತಿರುಗಿಸಿದ್ದು. ಈ ಹುಡಗಿ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿಬಿಟ್ಲು. ವಿರಾಟ್​ ಕೊಹ್ಲಿಯ ಹುಚ್ಚು ಅಭಿಮಾನಿ ದೀಪಿಕಾ ಘೋಷ್​ ರೆಡ್​ ಕ್ರಾಪ್​-ಟಾಪ್ ಧರಿಸಿ ಕ್ಯೂಟ್ ಆಗಿ ಕಾಣ್ತಿದ್ರು.  ಈ ಕ್ಯೂಟ್​ ಬ್ಯೂಟಿ, ಆರ್​ಸಿಬಿಗೆ ಚಿಯರ್​ ಅಪ್​ ಮಾಡೋದ್ರ  ಜೊತೆಗೆ ಯುವಕರ ಎದೆಗೆ ಕನ್ನ ಹಾಕಿ ಬಿಟ್ಚಿದ್ದಾಳೆ, ಕ್ರಿಕೆಟ್​ ಅಭಿಮಾನಿಗಳ ಈಕೆಯ ಮೇಲೆ ಹೊಸ ಕ್ರಷ್​ ಕ್ರೇಝ್​ ಎಷ್ಟರಮಟ್ಟಿಗಿದೆ ಇದೆ ಅಂದ್ರೆ, ನಿನ್ನೆವರೆಗೂ ಇನ್ಟ್ಟಾಗ್ರಾಂನಲ್ಲಿ ಕೇವಲ 4 ಸಾವಿರ ಫಾಲೋವರ್ಸ್ ಹೊಂದಿದ್ದ ದೀಪಿಕಾರನ್ನ, ಈಗ ಲಕ್ಷಾಂತರ ಜನ ಫಾಲೋ ಮಾಡ್ತಿದ್ದಾರೆ. ಅದೇನೆ ಇರಲಿ ಸದ್ಯ ಈಕೆ ಜನರ ಹೃದಯ ಗೆದ್ದ ಹುಡುಗಿ ಅಂತ ಹಲವರು ಟ್ವೀಟ್ ಮಾಡಿದ್ದಾರೆ. ಇದೀಗ ಆರ್ ಸಿಬಿ ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ, ಈ ನಡುವೆ ದೀಪಿಕಾ ಘೋಷ್ ಮಾತ್ರ ಅದೆಷ್ಟೋ ಹುಡುಗರ ಹೃದಯಕ್ಕೆ ಎಂಟ್ರಿ ಕೊಟ್ಟಿರೋದು ಸುಳ್ಳಲ್ಲ.

- Advertisement -

Latest Posts

Don't Miss