Sunday, May 26, 2024

Latest Posts

ವಿಜಯನಗರ ಜಿಲ್ಲೆ ರಚನೆಗೆ ಬೆಂಬಲಿಸಿದ ಕನ್ನಡ ಸ್ಟಾರ್ ಹೀರೋ

- Advertisement -

ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನಾಗಿ ಘೋಷಿಸಿರುವ ಸರ್ಕಾರದ ನಡೆಯನ್ನು ನಟ ಕಂ ನಿರ್ಮಾಪಕ ಅಜಯ್ ರಾವ್ ಬೆಂಬಲಿಸಿದ್ದಾರೆ. ಈ ಕುರಿತು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅಜಯ್ ರಾವ್ ಧನ್ಯವಾದ ತಿಳಿಸಿ ನಿನ್ನೆ ಅರಣ್ಯ ಸಚಿವ ಆನಂದ್ ಸಿಂಗ್‌ಗೆ ಪತ್ರ ಸಲ್ಲಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ನಟ ಅಜಯ್ ರಾವ್, ನನ್ನ ಜನ್ಮ ಭೂಮಿ, ನನ್ನ ಸ್ವಂತ ಊರು ಹೊಸಪೇಟೆ, ವಿಜಯ ನಗರ ಜಿಲ್ಲೆ ಎಂದು ಘೋಷಣೆಯಾಗಿರುವುದು ನನಗೆ ಒಂದು ದೊಡ್ಡ ಸಂಭ್ರಮ. ಹಾಗಾಗಿ ನಮ್ಮ ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆ ಸಚಿವರು, ಹಾಗು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ, “ವಿಜಯನಗರ ಜಿಲ್ಲಾ ಕಾರಣೀಭೂತ” ಸನ್ಮಾನ್ಯ ಶ್ರೀ ಆನಂದ ಸಿಂಗ್ ರವರಿಗೆ ನನ್ನ ಬೆಂಬಲ ಹಾಗು ಮೆಚ್ಚುಗೆಯ ಪತ್ರವನ್ನು ನೀಡುವುದರ ಮೂಲಕ ಸಂತಸವನ್ನು ಹಂಚಿಕೊಂಡೆ ಎಂದು ಬರೆದುಕೊಂಡಿದ್ದಾರೆ.

ಹಲವು ವರ್ಷಗಳಿಂದ ವಿಜಯನಗರ ಜಿಲ್ಲೆಯನ್ನಾಗಿ ಮಾಡುವಂತೆ ಪ್ರತಿಭಟನೆ, ಹೋರಾಟಗಳು ನಡೆದಿವೆ. ಕೊನೆಗೂ ಪ್ರತಿಭಟನಾಕಾರರಿಗೆ ಸರ್ಕಾರ ಮಣಿದೂ ವಿಜಯನಗರವನ್ನು ಜಿಲ್ಲೆಯಾಗಿ ಘೋಷಿಸಿದ್ದಾರೆ.

- Advertisement -

Latest Posts

Don't Miss