Saturday, July 27, 2024

Latest Posts

Janardhan Bhat : ಅರಿವು-ತಿಳಿವು ಕಾರ್ಯಕ್ರಮದಲ್ಲಿ ಲೂಸಿಯಾಡ್ಸ್, ಭಾರತದ ಅನ್ವೇಷಣೆ ಕುರಿತು ಉಪನ್ಯಾಸ

- Advertisement -

Karkala News : ವಾಸ್ಕೋಡಾಗಾಮ ಭಾರತಕ್ಕೆ ಜಲಮಾರ್ಗವನ್ನು ಕಂಡು ಹುಡುಕಿದ ಕಥಾನಕವನ್ನು ಪುರಾಣಕಥೆಯಂತೆ ಹೇಳುವ ಲೂಸಿಯಾಡ್ಸ್ ಎಂಬ ಪೋರ್ಚುಗೀಸ್ ಮಹಾಕಾವ್ಯವು ವಿಶ್ವದ ಮಹತ್ವದ ಮಹಾ ಕಾವ್ಯಗಳಲ್ಲಿ ಒಂದಾಗಿದ್ದು ಜಗತ್ತಿನ ಎಲ್ಲಾ ಭಾಷೆಗಳಿಗೂ ಇದು ಅನುವಾದಗೊಂಡಿದೆ. ಕನ್ನಡಕ್ಕೆ ಕೂಡಾ ಅನುವಾದಗೊಂಡಿದ್ದು ಓದಬೇಕಾದ ಕಾವ್ಯ ಎಂಬುದಾಗಿ ಖ್ಯಾತ ಸಾಹಿತಿ ಹಾಗೂ ವಿಮರ್ಶಕ ಡಾ. ಬಿ.ಜನಾರ್ದನ ಭಟ್ ಹೇಳಿದರು.

ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಕನ್ನಡ ಸಂಘ ಕಾಂತಾವರ ಇವರ ಜಂಟಿ ಸಹಭಾಗಿತ್ವದಲ್ಲಿ ಕಾರ್ಕಳದ ಉತ್ಸವ ಸಭಾಂಗಣದಲ್ಲಿ ಶನಿವಾರ ಜರುಗಿದ ತಿಂಗಳ ಅರಿವು-ತಿಳಿವು ಕಾರ್ಯಕ್ರಮದಲ್ಲಿ ಲೂಸಿಯಾಡ್ಸ್ ಅಥವಾ ಭಾರತದ ಅನ್ವೇಷಣೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಕವಿ ಕಮೋಯಿಶ್ ಪೋರ್ಚುಗೀಸರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸುವಂತೆ ಈ ಸುಂದರ ಕಾವ್ಯವನ್ನು ದಶಕಗಳ ಕಾಲ ಬರೆದು ಪ್ರಕಟಿಸಿದ. ಇದರಲ್ಲಿ ಪೋರ್ಚುಗೀಸ್ ಇತಿಹಾಸದ ಜತೆಗೆ ಭಾರತದಲ್ಲಿ ಆಗ ನಡೆದಿದ್ದ ಘಟನೆಗಳನ್ನು ಮತ್ತು ಸಾಮಾಜಿಕ ವಿವರಗಳನ್ನು ಇತಿಹಾಸಕ್ಕೆ ನಿಷ್ಠವಾದ ನಿರೂಪಣೆಯೊಂದಿಗೆ ಕವಿಯು ಇಲ್ಲಿ ದಾಖಲಿಸಿದ್ದು ಐತಿಹಾಸಿಕವಾಗಿಯೂ ಇದೊಂದು ಮಹತ್ವದ ಕೃತಿಯಾಗಿದೆ ಎಂದರು.

ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ.ಮೊಗಸಾಲೆ, ಅ.ಭಾ.ಸಾ.ಪ. ಕಾರ್ಕಳ ತಾಲೂಕು ಘಟಕದ ಗೌರವಾಧ್ಯಕ್ಷ ಎಸ್. ನಿತ್ಯಾನಂದ ಪೈ, ಉಪಾಧ್ಯಕ್ಷ ಏರ್‍ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಮನಿಷಾ ಕಾಮತ್ ಪ್ರಾರ್ಥಿಸಿ, ವೀಣಾ ರಾಜೇಶ್ ಅತಿಥಿಗಳನ್ನು ಪರಿಚಯಿಸಿದರು. ಮಾಲತಿ. ಜಿ.ಪೈ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು.

Pradeep Eshwar : ವರಮಹಾಲಕ್ಷ್ಮೀ ಹಬ್ಬಕ್ಕೆ ಪ್ರದೀಪ್ ಈಶ್ವರ್ ಬಂಪರ್ ಗಿಫ್ಟ್…!

Dog : ಸತ್ತ ನಾಯಿಯನ್ನು ತೆರವುಗೊಳಿಸದೆ ತಂಗುದಾಣದಲ್ಲಿ ಮಣ್ಣು ಸುರಿದ ಸ್ಥಳೀಯ ಪಂಚಾಯತ್…!

Free Bus: ಉಚಿತ ಬಸ್ ನಿಂದ ಹೈರಾಣಾದ ವಿದ್ಯಾರ್ಥಿಗಳು ಕೋರ್ಟ್ ಮೊರೆ

- Advertisement -

Latest Posts

Don't Miss