- Advertisement -
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ರು. ಬಿಎಸ್ವೈ ಪ್ರಮಾಣವಚನವನ್ನು ಕಣ್ತುಂಬಿಕೊಳ್ಳಲು ರಾಜಭವನದಲ್ಲಿ ಜನಸಾಗರವೇ ಕಿಕ್ಕಿರಿದು ತುಂಬಿತ್ತು.
ಹಸಿರುಶಾಲು ಹೊದ್ದು ಹಸ್ಮುಖಿಯಾಗಿ ಸಮಾರಂಭಕ್ಕೆ ಬಂದಿದ್ದ ಯಡಿಯೂರಪ್ಪ ಪಕ್ಷದ ಶಾಸಕರು, ಮುಖಂಡರು ಸೇರಿದಂತೆ ಅಪಾರ ಅಭಿಮಾನಿಗಳೆದುರು ದೇವರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ್ರು. ಪ್ರತಿಜ್ಞಾವಿಧಿಯನ್ನು ರಾಜ್ಯಪಾಲ ವಜೂಭಾಯ್ ವಾಲಾ ಬೋಧಿಸಿದ್ರು. ಇನ್ನು ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ರಾಜ್ಯಪಾಲರು ನೂತನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದ್ರು.
- Advertisement -