ಅಂತೂ-ಇಂತೂ ಯಡಿಯೂರಪ್ಪ ಬೇಡಿಕೆಗೆ ಅಮಿತ್ ಶಾ ಗ್ರೀನ್ ಸಿಗ್ನಿಲ್ ಕೊಡುವ ಸಮಯ ಬಂದಿದೆ.. ಕಾಡಿಬೇಡಿದ್ರೂ ಕಳೆದ ಭೇಟಿಯ ವೇಳೆ ಸಂಪುಟ ವಿಸ್ತರಣೆಗೆ ಓಕೆ ಅನ್ನದ ಅಮಿತ್ ಶಾ ನೆರೆಕುರಿತಂತೆ ವೈಮಾನಿಕ ಸಮೀಕ್ಷೆಗೆ ಆಗಮಿಸಿದ್ದ ವೇಳೆ ಬಿಎಸ್ ವೈಗೆ ಸಂಪುಟ ವಿಸ್ತರಣೆ ಮಾಡಲು ಪಟ್ಟಿ ತರುವಂತೆ ಸೂಚಿಸಿದ್ರು.. ಇದೀಗ ತನ್ನ ಸಂಪುಟಕ್ಕೆ ಯಾರ್ಯಾರು ಬೇಕು ಅಂತ ಪಟ್ಟಿ ಹಿಡಿದುಕೊಂಡು ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಕೂತಿದ್ದಾರೆ.
ಯಡಿಯೂರಪ್ಪ ಲಿಸ್ಟ್ ನಲ್ಲಿ ಇರೋದು ಯಾರು..?
ಆರ್. ಅಶೋಕ್, ಪದ್ಮನಾಭನಗರ ಕ್ಷೇತ್ರ – ಒಕ್ಕಲಿಗ ಕೋಟಾ
ಈಶ್ವರಪ್ಪ, ಶಿವಮೊಗ್ಗ ಕ್ಷೇತ್ರ – ಕುರುಬ ಕೋಟಾ
ಗೋವಿಂದ ಕಾರಜೋಳ – ಮುಧೋಳ ಕ್ಷೇತ್ರ – ದಲಿತ ಕೋಟಾ
ಶ್ರೀರಾಮುಲು – ಮೊಳಕಾಲ್ಮೂರು ಕ್ಷೇತ್ರ – ನಾಯಕ ಕೋಟಾ
ಅರವಿಂದ ಲಿಂಬಾವಳಿ – ಮಹದೇವಪುರ ಕ್ಷೇತ್ರ – ದಲಿತ ಕೋಟಾ
ಉಮೇಶ್ ಕತ್ತಿ – ಹುಕ್ಕೇರಿ ಕ್ಷೇತ್ರ – ಲಿಂಗಾಯತ ಕೋಟಾ
ಬಸನಗೌಡ ಪಾಟೀಲ್ ಯತ್ನಾಳ್ – ವಿಜಯ ಪುರ ಕ್ಷೇತ್ರ – ಲಿಂಗಾಯತ ಕೋಟಾ
ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ ಕ್ಷೇತ್ರ – ಲಿಂಗಾಯತ ಕೋಟಾ
ರಾಮದಾಸ್ – ಕೆ.ಆರ್ ಕ್ಷೇತ್ರ – ಬ್ರಾಹ್ಮಣ ಕೋಟಾ
ಹಾಲಾಡಿ ಶ್ರೀನಿವಾಸ ಶೆಟ್ಟಿ – ಕುಂದಾಪುರ ಕ್ಷೇತ್ರ
ಸುನೀಲ್ ಕುಮಾರ್ – ಕಾರ್ಕಳ ಕ್ಷೇತ್ರ
ಅಂಗಾರ – ಸುಳ್ತ ಕ್ಷೇತ್ರ
ಮುರುಗೇಶ್ ನಿರಾಣಿ, ಬೀಳಗಿ ಕ್ಷೇತ್ರ, ಲಿಂಗಾಯತ ಕೋಟಾ
ಕೆ.ಜಿ ಬೋಪಯ್ಯ, ವಿರಾಜಪೇಟೆ ಕ್ಷೇತ್ರ
ವಿ, ಸೋಮಣ್ಣ, ಗೋವಿಂದರಾಜನಗರ ಕ್ಷೇತ್ರ, ಲಿಂಗಾಯತ ಕೋಟಾ
ಆಪರೇಷನ್ ಕಮಲ ನೇತೃತ್ವ ವಹಿಸಿದ್ದ ನಾಲ್ವರಿಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಮುಂದಾಗಿದ್ದ ಅವರ ಹೆಸರನ್ನ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ..
ಸಿ.ಪಿ ಯೋಗೀಶ್ವರ್, ಎಂಎಲ್ ಸಿ ಮಾಡಿ ಸಚಿವ ಸ್ಥಾನ ನೀಡುವುದು
ಡಾ. ಅಶ್ವಥ್ ನಾರಾಯಣ್, ಮಲ್ಲೇಶ್ವರಂ ಶಾಸಕ,
ಎಸ್.ಆರ್ ವಿಶ್ವನಾಥ್, ಯಲಹಂಕ ಕ್ಷೇತ್ರ
ಸತೀಶ್ ರೆಡ್ಡಿ, ಬೊಮ್ಮನಹಳ್ಳಿ ಕ್ಷೇತ್ರ,
ಹಿರಿಯ ನಾಯಕರ ಪೈಕಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಜಾಜಿನಗರದ ಸುರೇಶ್ ಕುಮಾರ್ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ದೆ. ಇನ್ನು ಚಿಕ್ಕಮಗಳೂರು ಶಾಸಕ ಸಿ.ಟಿ ರವಿಗೆ ಪಕ್ಷ ಮಹತ್ವದ ಜವಾಬ್ದಾರಿ ನೀಡಲು ಚಿಂತಿಸಿದ್ದು ಇವರು ಸಹ ಬಿಎಸ್ ವೈ ಸಂಪುಟದಿಂದ ದೂರ ಳಿಯಲಿದ್ದಾರೆ.