Saturday, July 27, 2024

Latest Posts

Cauvery water: ತಮಿಳುನಾಡು ಕೇಳುವ ಮುನ್ನ ಸರ್ಕಾರ ನೀರು ಬಿಟ್ಟಿದೆ; ಸಿಟಿ ರವಿ..!

- Advertisement -

ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲಿಸಿದ ಮಾಜಿ ಸಚಿವ ಸಿಟಿ ರವಿ ಆಡಳಿತ ಪಕ್ಷದ ವಿರುದ್ದ ಕಿಡಿಕಾರಿದರು. ಆಡಳಿತ ನಡೆಸುವ ಪಕ್ಷಗಳು ಬದಲಾಗಿವೆ. ಆದರೆ ರೈತ ಹಿತರಕ್ಷಣಾ ಸಮಿತಿ ನಿಲುವುಗಳು ಎಂದಿಗೂ ಬದಲಾಗಿಲ್ಲ.

ಕಾವೇರಿ ಉಪನದಿ ಹೇಮಾವತಿ ಉಗಮವಾಗುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ನನ್ನ ಸಾರ್ವಜನಿಕ ಜೀವನ ಪ್ರಾರಂಭವಾಗಿದ್ದು ರೈತ ಚಳುವಳಿ ಮೂಲಕ, ನನಗೂ ರೈತ ಕುಟುಂಬದ ಹಿನ್ನೆಲೆ ಇದೆ ರೈತನ ನೋವು-ನಲಿವು ನನಗೆ ಗೊತ್ತಿದೆ. ಇವತ್ತು ನಡೆಯುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತದೆ ಇದ್ರೆ ಬದುಕಿದ್ದು ಸತ್ತಂತೆ. ಆ‌ ಕಾರಣಕ್ಕೆ ಪ್ರತಿಭಟನೆಗೆ ಬಂದಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ಸಿಗರು ಪಾದಯಾತ್ರೆ ಮಾಡಿದಾಗ ಜನರಿಗೆ ವಿಶ್ವಾಸ ಹೆಚ್ಚಿತ್ತು.ಹಾಗಾಗಿ ಅವರನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸಿದ್ರು. ಆದರೆ ಕಾಂಗ್ರೆಸ್ ಅಧಿಕಾರ ಹಿಡಿದ ಬಳಿಕ ರೈತರ ಹಿತ ಮರೆತಿದೆ. ಮಗು ಅತ್ತಾಗ ತಾಯಿ ಹಾಲು ಕೊಡ್ತಾಳೆ. ಆದರೆ ತಮಿಳುನಾಡು ಕೇಳುವ ಮುನ್ನ ನಮ್ಮ ಸರ್ಕಾರ ನೀರು ಬಿಡ್ತು.

ವಾಸ್ತವಿಕ ಪರಿಸ್ಥಿತಿಗೆ ಮನವರಿಕೆ ಮಾಡುವ ಕೆಲಸ ಆರಂಭದಲ್ಲೇ ಆಗಬೇಕಿತ್ತು. ವಾಡಿಕೆಗಿಂದ ಈ ಬಾರಿ ಮಳೆ‌ಯಾದ ಕಾರಣ ಡ್ಯಾಂ‌ನಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ಈ ಆದೇಶ ಪಾಲಿಸಿದ್ರೆ ಡ್ಯಾಂ ನಲ್ಲಿ ಕೇವಲ 6TMC ಮಾತ್ರ ಉಳಿಯುತ್ತದೆ. ಹೋರಾಟ ಮಂಡ್ಯದವರು ಮಾತ್ರ ಅಲ್ಲ ಬೆಂಗಳೂರಿನವರು ಮಾಡಬೇಕು.

ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಎಲ್ಲಿಂದ ತರ್ತೀರಿ. ಕಬಿನಿ, ಕೆಆರ್‌ಎಸ್ ಕಟ್ಟಿದ್ದು ತಮಿಳುನಾಡಿಗೆ ಬೇಕಾದಾಗ ನೀರು ಬಿಡೋದಕ್ಕಾ? ಮಳೆ ಆದಾಗ ನಾವ್ಯಾರು ನೀರು ಯಾಕೆ ಬಿಟ್ರಿ ಎಂದು ಕೇಳಿಲ್ಲ. ಆದರೆ ಸಂಕಷ್ಟ ಇದ್ದ ಕಾಲದಲ್ಲಿ ನೀರು ಬಿಡಬಾರದು.

ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದವರು ಈಗ ಎಲ್ಲಿಗೋಯ್ತು ಹಕ್ಕು. ರಾಜ್ಯದ ಹಿತ ಮುಖ್ಯವಾ ಇಲ್ಲಾ ನಿಮಗೆ ರಾಜಕೀಯ ಸಂಬಂಧ ಮುಖ್ಯವಾ? ಬೆಂಗಳೂರು ಜನರು ನಿಮ್ಮ ವಿರುದ್ಧ ಮತಕೊಟ್ರು ಅಂತ ಅವರಿಗೆ ಕುಡಿಯುವ ನೀರು ಕೊಡಬಾರದು ಅಂತ ಹೀಗೆ ಮಾಡ್ತಿದ್ದೀರಾ? ನನಗೆ ಈ ಅನುಮಾನ ಮೂಡುತಿದ್ದೆ.

ಅಧಿಕಾರದಲ್ಲಿದ್ದಾಗ ಗುಂಡಾ ರೀತಿ ದುರಹಂಕಾರದಿಂದ ವರ್ತಿಸಬೇಡಿ. ನಿಮ್ಮ ದುರಹಂಕಾರಕ್ಕೆ ಈ ಜನ ಮದ್ದು ಅರೆಯುತ್ತಾರೆ. ಏನು ಬೇಕಾದರೂ ಆಗಲಿ ರಾಜ್ಯದ ಹಿತ ಮುಖ್ಯ ಎಂದಿದ್ದರೆ ಅದು ಸದ್ಗುಣ.

ನೀರು ಉಳಿಸಿಕೊಳ್ಳುವ ಕೆಲಸ ನಿಮ್ಮಿಂದ ಆಗಿಲ್ಲ. ಹಂಚಿ ತಿನ್ನೋದು, ಕುಡಿ ಬಾಳೋದು ಈ ನೆಲದ ಗುಣ.ಈಗ ನಾವೇ ಒಣಗಿ ಹೋಗುವಾಗ ಕುಡಿಯುವ ನೀರು ಕೇಳಿದ್ರೆ ದುರಹಂಕಾರ ಮಾತು ಆಡ್ತೀರಾ? ರಾಜ್ಯ ಸರ್ಕಾರ ನೀರು ಬಿಡಲ್ಲ ಎಂದು ನಿಲುವು ತಾಳಲಿ ನಾವು ಅವರೊಂದಿಗೆ ನಿಲ್ಲುತ್ತೇವೆ. ತಮಿಳುನಾಡು ಕೇಳುವ ಮುನ್ನ ನೀರು ಬಿಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಕಾಂಗ್ರೆಸ್ ವಿರುದ್ದ ಸಿಟಿ ರವಿ ಕಿಡಿ ಕಾರಿದರು.

Laxmi hebbalkar: ಜನರು‌ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು..!

Justin Trudeau: ಕಿರಿಕ್ ಮಾಡಿದ ಕೆನಡಾ ಪ್ರಧಾನಿಗೆ ಭಾರೀ ಹಿನ್ನಡೆ

Cauvery water: ರಸ್ತೆಯಲ್ಲಿ ಟೀ ಮಾಡಿ ಪ್ರತಿಭಟನೆ: ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ;

- Advertisement -

Latest Posts

Don't Miss