Sunday, May 26, 2024

Latest Posts

ಪಾಕ್ ಆಟಗಾರನ ಜೊತೆ ಚೇತೇಶ್ವರ ಪೂಜಾರ ಪಾದಾರ್ಪಣೆ

- Advertisement -

ಲಂಡನ್: ಭಾರತ ಕ್ರಿಕೆಟ್ ತಂಡದ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಮತ್ತು ಪಾಕಿಸ್ಥಾನ ವಿಕೆಟ್ ಕೀಪರ್ ಮೊಹ್ಮದ್ ರಿಜ್ವಾನ್ ಕೌಂಟಿ ಕ್ರಿಕೆಟ್‍ನಲ್ಲಿ ಸಸೆಕ್ಸ್ ತಂಡದ ಪಾದಾರ್ಪಣೆ ಮಾಡಿದ್ದಾರೆ.


ಕೌಂಟಿ ಕ್ರಿಕೆಟ್ ಚಾಂಪಿಯನ್‍ಶಿಪ್ ವಿಭಾಗ2ರ ಡರ್ಬಿಶೈರ್ ವಿರುದ್ಧದ ನಡೆದ ಪಂದ್ಯದಲ್ಲಿ ರಿಜ್ವಾನ್ ಹಾಗೂ ಪೂಜಾರ ಸಸೆಕ್ಸ್ ಪರ ಚೊಚ್ಚಲ ಪಂದ್ಯವಾಡಿದ್ದಾರೆ. ಪೂಜಾರ ಈ ಮೊದಲು ಆಂಗ್ಲರ ನಾಡಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು.

ಆದರೆ ರಿಜ್ವಾನ್ ಮೊದಲ ಬಾರಿಗೆ ಕ್ರಿಕೆಟ್ ಆಡುತ್ತಿರುವುದು ವಿಶೇಷ. ಇವರಿಬ್ಬರ ಫೋಟೋವನ್ನು ಸಸೆಕ್ಸ್ ತಂಡವು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ತಂಡದಿಂದ ಹೊರಗುಳಿದಿದ್ದ ಪೂಜಾರ ಕೌಂಟಿ ಕ್ರಿಕೆಟ್ ಮೂಲಕ ತಂಡಕ್ಕೆ ಮರಳಲು ಪ್ರಯತ್ನಿಸಲಿದ್ದಾರೆ.

- Advertisement -

Latest Posts

Don't Miss