Saturday, October 12, 2024

Latest Posts

ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಕೈ-ದಳ : ರಾಜಭವನಕ್ಕೆ ಮುತ್ತಿಗೆ ಕರೆ..!

- Advertisement -
https://www.youtube.com/watch?v=9DMvdKJ3hJA

ಬೆಂಗಳೂರು : ದೋಸ್ತಿ ಸರ್ಕಾರದ ಶಾಸಕರ ರಾಜೀನಾಮೆ ಹೈಡ್ರಾಮಾ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ ನಾಯಕರು ಸಿಡಿದೆದ್ದಿದ್ದಾರೆ..  ಬಿಜೆಪಿ ಆಪರೇಷನ್ ಕಮಲ ಮಾಡ್ತಿದೆ, ಇದಕ್ಕೆ ರಾಜ್ಯಪಾಲ ವಾಲಾ ಕುಮ್ಮಕ್ಕು ನೀಡ್ತಿದ್ದಾರೆ ಅಂತ ರೋಪಿಸಿ ರಾಜಭವನ ಮುತ್ತಿಗೆಗೆ ಮುಂದಾಗಿದ್ದಾರೆ..

ಪ್ರಜಾಪ್ರಭುತ್ವ ಉಳಿವಿಗಾಗಿ ನಮ್ಮ ಹೋರಾಟ  : ಮಲ್ಲಿಕಾರ್ಜುನ ಖರ್ಗೆ

ಇನ್ನು ಕರ್ನಾಟಕ ಸಮ್ಮಿಶ್ರ ಸರ್ಕಾರ ಉರುಳಿಸಲು ಕೇಂದ್ರ ಸರ್ಕಾರ ಪಯತ್ನ ಮಾಡ್ತಿದೆ. ಬಿಜೆಪಿಯ  ಕುತಂತ್ರ ಫಲಿಸೋದಿಲ್ಲ ಅಂತ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು.. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಈಶ್ವರ್ ಖಂಡ್ರೆ ಸಹ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ದೋಸ್ತಿಗೆ ಮುಳುವಾಗುತ್ತಾ ಈ ಪ್ರತಿಭಟನೆ..?

ಇನ್ನು ರಾಜ್ಯಪಾಲರ ವಿರುದ್ಧವೇ ಆಡಳಿತ ಪಕ್ಷ ಪ್ರತಿಭಟನೆ ಕರೆಕೊಟ್ಟಿರೋದು ಕಾಂಗ್ರೆಸ್-ಜೆಡಿಎಸ್ ಗೆ ಮುಳುವಾಗುವ ಸಾಧ್ಯತೆ ಇದೆ. ಆಡಳಿತ ಪಕ್ಷವೇ ಮುತ್ತಿಗೆ ಹಾಕಿದ್ರೆ ರಾಜ್ಯಪಾಲರು ಕಾನೂನಾತ್ಮಾಕವಾಗಿ ರಾಜ್ಯ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡುವ ಸಾಧ್ಯತೆ ಇದೆ. ಹೇಗಿದ್ದರೂ 14 ಶಾಸಕರು ರಾಜೀನಾಮೆ ನೀಡಿರೋ ಜೊತೆಗೆ ಇಬ್ಬರು ಪಕ್ಷೇತರರು ಬೆಂಬಲ ಹಿಂತಗೆದ ಕೂಡ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗುವ ಸಾಧ್ಯತೆ ಇದೆ.. ಅಲ್ಲದೇ ಬಿಜೆಪಿ ನಾಯಕರು ರಾಜ್ಯಪಾಲರ ಬಳಿ ನಿಯೋಗ ತೆರಳಿದಾಗ ಕುಮಾರಸ್ವಾಮಿ ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ಬಹುಮತ ಸಾಬೀತುಪಡಿಸುವಂತೆ ಬಿಜೆಪಿ ಒತ್ತಾಯಿಸಿದ್ರೆ ರಾಜ್ಯಪಾಲರು ಕುಮಾರಸ್ವಾಮಿಗೆ ಬಹುಮತ ಸಾಬೀತಿಗೆ ಸೂಚಿಸಿದ್ರೆ ರಾಜೀನಾಮೆ ನೀಡಿರುವ ಶಾಸಕರು ಗೈರಾಗೋ ಮೂಲಕ ಕುಮಾರಸ್ವಾಮಿ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಸೋಲಾಗಿ ಸಮ್ಮಿಶ್ರ ಸರ್ಕಾರ ಪತನವಾಗೋದು ಗ್ಯಾರಂಟಿ ಅಂತ ಹೇಳಲಾಗ್ತಿದೆ..

ಯಸ್ ವೀಕ್ಷಕರೇ ದೋಸ್ತಿ ಪಕ್ಷಗಳು ರಾಜ್ಯಪಾಲರ ವಿರುದ್ಧ ಪ್ರತಿಭಟನೆಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ಕಾಮೆಂಟ್ ಮಾಡಿ.

https://www.youtube.com/watch?v=uFofHtw9Qq8
- Advertisement -

Latest Posts

Don't Miss