Saturday, July 27, 2024

Latest Posts

ನೃತ್ಯ ಮಾಡಿದ ವಿಡಿಯೋ ವೈರಲ್ : ನಾಲ್ವರು ಮಹಿಳಾ ಕಾನ್ಸ್ಟೆಬಲ್ ಅಮಾನತು

- Advertisement -

ಉತ್ತರ ಪ್ರದೇಶದಲ್ಲಿ ನಾಲ್ವರು ಮಹಿಳಾ ಕಾನ್​ಸ್ಟೆಬಲ್​ಗಳು ಭೋಜ್​ಪುರಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆ ನಾಲ್ಕು ಜನರನ್ನು ಅಮಾನತು ಮಾಡಲಾಗಿದೆ. ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ನಾಲ್ವರು ಮಹಿಳಾ ಕಾನ್​ಸ್ಟೆಬಲ್​ಗಳು ಸಮವಸ್ತ್ರ ಧರಿಸಿರಲಿಲ್ಲ ಮತ್ತು ಹಾಡಿಗೆ ನೃತ್ಯ ಮಾಡಿದ್ದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಕಾನ್‌ಸ್ಟೆಬಲ್‌ಗಳಾದ ಕವಿತಾ ಪಟೇಲ್, ಕಾಮಿನಿ ಕುಶ್ವಾಹಾ, ಕಾಶಿಶ್ ಸಾಹ್ನಿ ಮತ್ತು ಸಂಧ್ಯಾ ಸಿಂಗ್ ಅವರನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮುನಿರಾಜ್ ಜಿ ಅವರು ಎಸ್ ಪಿ ಪಂಕಜ್ ಪಾಂಡೆಯವರ ಸಲ್ಲಿಸಿದ ತನಿಖಾ ವರದಿ ಆಧರಿಸಿ ಅಮಾನತುಗೊಳಿಸಿದ್ದಾರೆ. ಅಯೋಧ್ಯೆಯ ರಾಮಜನ್ಮಭೂಮಿ ಬಳಿ ಭದ್ರತೆಗಾಗಿ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ನೇಮಿಸಲಾಗಿತ್ತು.

ಇಂದು ಕುಮಾರಸ್ವಾಮಿ 64ನೇ ವರ್ಷದ ಹುಟ್ಟುಹಬ್ಬ : ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ನಾಲ್ವರು ಕಾನ್‌ಸ್ಟೆಬಲ್‌ಗಳಲ್ಲಿ ಒಬ್ಬರು ಉತ್ತಮ ನೃತ್ಯಗಾರರಾಗಿದ್ದರಿಂದ,ಅವರು ಭೋಜ್ ಪುರಿ ಹಾಡಿಗೆ ನೃತ್ಯ ಮಾಡಿದರೆ ಉಳಿದವರು ಚಪ್ಪಾಳೆ ತಟ್ಟುವುದರ ಮೂಲಕ ಪ್ರೋತ್ಸಾಹಿಸಿದ್ದರು. ಮತ್ತೊಬ್ಬ ಮಹಿಳಾ ಕಾನ್‌ಸ್ಟೆಬಲ್ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಮಹಿಳಾ ಸಿಪಾಯಿಗಳ ಡ್ಯಾನ್ಸ್ ಎಂಬ ಶೀರ್ಷಿಕೆಯನ್ನು ವಿಡಿಯೋಗೆ ಸೇರಿಸಲಾಗಿದ್ದು ಅದು ವೈರಲ್ ಆಗಿದೆ. ಈ ಘಟನೆ ಬಗ್ಗೆ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪ್ರತಿಕ್ರಿಯೆ ನೀಡಿ ನಾಲ್ಕು ಜನ ಹಿರಿಯ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.

ಕೊಬ್ಬರಿ ಬೆಲೆ ಕುಸಿತ ಹಿನ್ನೆಲೆ, ಇಂದು ಅರಸೀಕೆರೆ ಬಂದ್

ಹಾಸನದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಮಾಜಿ ಸಚಿವ ಎ.ಮಂಜು

- Advertisement -

Latest Posts

Don't Miss