- Advertisement -
ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಒಡೆಯ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರ ಭಾರೀ ಸೌಂಡ್ ಮಾಡ್ತಿದ್ದು ಶೀಘ್ರವೇ ಬಿಡುಗಡೆಯ ದಿನಾಂಕ ಪ್ರಕಟವಾಗಲಿದೆ.
ಡಿ ಬಾಸ್ ದರ್ಶನ್ ಗೆಳೆಯ ನಿರ್ಮಾಪಕ ಸಂದೇಶ್ ಚಿತ್ರವನ್ನ ದೊಡ್ಡಮಟ್ಟದಲ್ಲಿ ಬಿಡುಗಡೆಗೆ ಚಿಂತನೆ ನಡೆಸಿದ್ದಾರೆ. ಈ ಮೊದಲಿ ತೀರ್ಮಾನಿಸಿದಂತೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಒಡೆಯ ತೆರೆಕಾಣಬೇಕಾಗಿತ್ತು. ಕುರುಕ್ಷೇತ್ರ ಸಕ್ಸಸ್ ಫುಲ್ ಪ್ರದರ್ಶನ ಹಿನ್ನೆಲೆ ಒಡೆಯ ರಿಲೀಸ್ ತಡವಾಗ್ತಿದೆ. ಮುಂದಿನ ವಾರದೊಳಗೆ ಸಿನಿಮಾ ರಿಲೀಸ್ ಡೇಟ್ ಫೈನಲ್ ಆಗುವ ಸಾಧ್ಯತೆ ಇದೆ.
- Advertisement -