Tuesday, October 3, 2023

Latest Posts

ಗೋ ಬ್ಯಾಕ್ ಕುಮಾರಸ್ವಾಮಿ, ಶಿವಕುಮಾರ್- ಹೋಟೆಲ್ ಮುಂದೆ ಪ್ರತಿಭಟನೆ..!

- Advertisement -

ಮುಂಬೈ : ರಾಜೀನಾಮೆ ನೀಡಿರುವ ಶಾಸಕರನ್ನ ಕರೆತರಲು ಡಿಕೆ ಶಿವಕುಮಾರ್ ಟೀಂ ಮುಂಬೈ ಗೆ ಬರ್ತಿದ್ದಂತೆ ಪ್ರತಿಭಟನೆ ಶುರುವಾಗಿದೆ. ಹೋಟೆಲ್ ಮುಂಭಾಗ ಗೋ ಬ್ಯಾಕ್ ಕುಮಾರಸ್ವಾಮಿ.. ನಾರಾಯಣಗೌಡ ಜಿಂದಾಬಾದ್ ಅಂತ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಲಾಗ್ತಿದೆ. ಶಾಸಕರು ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯೋದಿಲ್ಲಅಂತ ಹೇಳಿದ್ರು ಡಿಕೆಶಿ ಮಾತ್ರ ತಮ್ಮ ಪ್ರಯತ್ನ ನಿಲ್ಲಿಸ್ತಿಲ್ಲ.  ನಡುವೆ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡ್ತಿರೋರು ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಬೆಂಬಲಿಗರು ಅಂತ ಹೇಳಲಲಾಗ್ತಿದೆ.. ಶಾಸಕ ನಾರಾಯಣ ಗೌಡ ಮುಂಬೈ ನಲ್ಲಿ ಹೋಟೆಲ್ ಬ್ಯುಸಿನೆಸ್ ಮಾಡ್ತಿದ್ದು ಬೆಂಬಲಿಗರ ಮೂಲಕ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಿಸಿದ್ದಾರೆ..

 ಇನ್ನು ಡಿಕೆ ಶಿವಕುಮಾರ್ ಈಗ ಹೋಟೆಲ್ ರೀಚ್ ಆಗಿದ್ದು ಫ್ರಂಟ್ ಗೇಟ್ ಮೂಲಕ ಹೋಟೆಲ್ ಒಳಗೆ ಪ್ರವೇಶ ಮಾಡಿದ್ದು ನಾನು ಹೋಟೆಲ್ ಬುಕ್ ಮಾಡಿದ್ದೇನೆ. ನಾನು ನನ್ನ ಸ್ನೇಹಿತರನ್ನಭೇಟಿ ಮಾಡ್ತೇನೆ ಅಂತ ಡಿಕೆಶಿ ಹೇಳಿದ್ರು.. ಹಾಗೆಯೇ ಮಹಾರಾಷ್ಟ್ರ ಸಿಎಂ ನನ್ನ ಒಳ್ಳೆಯ ಸ್ನೇಹಿತ ಇದು ಒಳ್ಳೆಯ ಸರ್ಕಾರ ಅಂತ ಮಾಧ್ಯದವರ ಜೊತೆ ಡಿಕೆ ಶಿವಕುಮಾರ್ ಹೇಳಿದ್ರು.. ಡಿಕೆ ಶಿವಕುಮಾರ್ ಅಲ್ಲಿ ತಲುಪಿದ ಕೂಡಲೇ ಗೋ ಬ್ಯಾಕ್ ಶಿವಕುಮಾರ್ ಘೋಷಣೆ ಶುರುವಾಯ್ತು. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ಸಹ ಉಂಟಾಯ್ತು.

https://www.youtube.com/watch?v=1rmliZrbuKU
- Advertisement -

Latest Posts

Don't Miss