Saturday, July 27, 2024

Latest Posts

Drought Area: ನಾಯಕನಹಟ್ಟಿನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಒತ್ತಾಯ..!

- Advertisement -

ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಕ್ರಮ ಕೈಗೊಳ್ಳುವಂತೆ ನಾಯಕನಹಟ್ಟಿ ಹೋಬಳಿ ಕೇಂದ್ರದ ನಾಡಕಚೇರಿಯ ಉಪ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಾಲಿನಲ್ಲಿ ಮುಂಗಾರುಮಳೆ ವಾಡಿಕೆ ಗಿಂತ ಕಡಿಮೆಯಾಗಿದ್ದು ಬಿತ್ತಿದ ಬೆಳೆಗಳು ನೂರಕ್ಕೆ ನೂರರಷ್ಟು ಒಣಗುತ್ತಿವೆ ಸತತ ಒಂದು ತಿಂಗಳಿನಿಂದ ಮಳೆಯಾಗಿಲ್ಲ ಈ ದಿನವೇ ಮಳೆ ಬಂದರೂ ಬೆಳೆಗಳಾಗುವುದಿಲ್ಲ. ಮುಂಗಾರು ಬೆಳೆಗಳು ಸಂಪೂರ್ಣ ನೆಲಕಚ್ಚಿವೆ ಮಳೆಬಾರದಿರುವ ಕಾರಣ ಹಿಂಗಾರಿಗೂ ಹಿನ್ನಡೆಯಾಗುತ್ತಿದೆ.

ನಮ್ಮ ಹೋಬಳಿಯಲ್ಲಿ ಯಾವುದೇ ನದಿ ಮೂಲಗಳಿಲ್ಲ ನೀರಿನ ಚಾನಲ್ ಗಳು ಇಲ್ಲ. ಒಂದೆಡೆ ಮಳೆಯನ್ನು ನಂಬಿರುವ ರೈತರು ಮತ್ತೊಂದೆಡೆ ಕೊಳವೆ ಬಾವಿಗಳ ನೀರನ್ನು ನಂಬಿ ನೀರಾವರಿ ಮಾಡುತ್ತಿರುವ ರೈತರು, ರೈತರ ಕೊಳವೆ ಭಾವಿಗಳು ಸಹ ನೀರಿಲ್ಲದೆ ಬತ್ತಿ ಹೋಗುತ್ತಿವೆ .ಇರುವ ಅಲ್ಪ ನೀರನ್ನಾದರು ತೋಟಗಳಿಗೆ ಆಯಿಸಲು ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ ತೋಟಗಾರಿಕೆ ಬೆಳೆಗಳು ಸಹ ನಾಶವಾಗುತ್ತಿವೆ ರೈತ ಸಮುದಾಯ ತುಂಬಾ ಸಂಕಷ್ಟದಲ್ಲಿದೆ.

ಹಳ್ಳಿಗಳಲ್ಲಿರುವ ಜಾನುವಾರುಗಳಿಗೆ ಹಾಗೂ ದೇವರ ರಾಸುಗಳಿಗೆ ಮೇವು ನೀರಿಲ್ಲದೆ ಸಾಯುವಂತ ಪರಿಸ್ಥಿತಿ ಬಂದಿದೆ ಆಳುವ ಎಲ್ಲಾ ಸರ್ಕಾರಗಳು ನಗರಗಳಿಗೆ ಸ್ಮಾರ್ಟ್ ಸಿಟಿ ಮೆಗಾ ಸಿಟಿ ಯೋಜನೆಗಳನ್ನು ಘೋಷಣೆ ಮಾಡುತ್ತಾರೆ ವಿನಹ ನಮ್ಮ ಹಳ್ಳಿಗಳನ್ನು ಕಡೆಗಣಿಸಿದ್ದಾರೆ ಸ್ಮಾರ್ಟ್ ಸಿಟಿ ಮೆಗಾ ಸಿಟಿ ಗಳು ಹಣ ಕೊಡುತ್ತವೆ ಹೊರತು ತಿನ್ನೋಕೆ ಅನ್ನ ಆಹಾರ ಕೊಡಲ್ಲ.ಹಳ್ಳಿಯಲ್ಲಿದ್ದು ಕೃಷಿಯಲ್ಲಿ ದುಡಿದು ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲರಿಗೂ ಅನ್ನ ಆಹಾರ ಕೊಡುವುದು ನಾವು ರೈತರು ಅಂದರೆ ಹಳ್ಳಿಗರು ರೈತರು ವಾಸಿಸುವ ಹಳ್ಳಿಗಳ ಅಭಿವೃದ್ಧಿ ಕಡೆ ಗಮನ ಕೊಡಿ ನಮ್ಮ ಕೃಷಿ ಪಂಪ್ಸೆಟ್ಟುಗಳಿಗೆ ಉತ್ತಮವಾದ ವಿದ್ಯುತ್ ವ್ಯವಸ್ಥೆ ಮಾಡಿಕೊಡಬೇಕು.

ಈಗ ಮಳೆ ಇಲ್ಲದೆ ಬೆಳೆ ಇಲ್ಲದೆ ಬರಗಾಲಕ್ಕೆ ಬಲಿಯಾಗಿರುವ ನಮಗೆ ನಮ್ಮ ಹೋಬಳಿಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಬೆಳೆ ವಿಮೆ ಬೆಳೆ ಪರಿಹಾರ ಸಿಗುವಂತೆ ಮಾಡಬೇಕು ಸಾಲ ಕೊಟ್ಟ ಬ್ಯಾಂಕುಗಳು ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡದೆ ಸಾಲ ಕಟ್ಟಲು ಸಮಯಾವಕಾಶ ಕೊಡಿಸಬೇಕು ಪ್ರತಿ ಗ್ರಾಮ ಪಂಚಾಯಿತಿ ಬಂದು ಗೋ ಶಾಲೆ ಪ್ರಾರಂಭಿಸಬೇಕು ದೇವರೆತ್ತುಗಳಿಗೆ ವಿಶೇಷವಾಗಿ ಮೇವು ನೀರಿನ ವ್ಯವಸ್ಥೆ ಮಾಡಿಕೊಡಬೇಕು ರೈತರು ಗುಳೆ ಹೋಗದಂತೆ ರೈತರಿಗಾಗಿ ಎನ್ ಆರ್ ಈ ಜಿಎ ಯೋಜನೆ ಅಡಿ ಹೆಚ್ಚುವರಿಯಾಗಿ ಕಾಮಗಾರಿಗಳನ್ನು ಮಾಡಲು ಕ್ರಮ ಕೈಗೊಳ್ಳಬೇಕು ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಮೇಲಿನ ಹಿರಿಯ ಅಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತಂದು ಸರ್ಕಾರದಿಂದ ನಮ್ಮ ರೈತ ಬಾಂಧವರಿಗೆ ಅನುಕೂಲ ಮಾಡಿಕೊಡಬೇಕೆಂದು ಧನ್ಯವಾದಗಳೊಂದಿಗೆ ಕೇಳಿಕೊಳ್ಳುತ್ತೇವೆ ಈ ಸಂದರ್ಭದಲ್ಲಿ ರೃತ‌ ಮುಖಂಡರಾದ ಪಾಲಯ್ಯ ಬಿ.ಟಿ.ಪ್ರಕಾಶ್. ಮಹೇಶ್ ಕುಮಾರ್ ಓಬಣ್ಣ ಹನುಮಯ್ಯ ಬಸವರಾಜ ಶಿವರಾಜ್ ಭೀಮಣ್ಣ ಶಿವಕುಮಾರ್ ಹಲವಾರು ರೈತ ಬಾಂಧವರು ಭಾಗವಹಿಸಿದ್ದರು.

Police tweet: ವೀಲಿಂಗ್ ಮಾಡುವವನನ್ನು ಬಂಧಿಸಿ ವಿಶೇಷವಾಗಿ ಟ್ವೀಟ್ ಮಾಡಿದ ಪೊಲೀಸರು..!

CM siddaramaiah; ದೂರವಾಣಿ ಮೂಲಕ‌ ಇಸ್ರೋ ಅಧ್ಯಕ್ಷರಿಗೆ ಅಭಿನಂದಿಸಿದ ಸಿಎಂ ..!

Leaders support: ಜಲ ವಿವಾದ: ಸರ್ವಪಕ್ಷ ಸಭೆಯಲ್ಲಿ ಸರ್ಕಾರಕ್ಕೆ ಮುಖಂಡರ ಸಂಪೂರ್ಣ ಬೆಂಬಲ :

 

- Advertisement -

Latest Posts

Don't Miss