ಕೇರಳ: ಕರ್ನಾಟಕದ ಸಿಂಗಂ ಅಂತ ಖ್ಯಾತಿ ಪಡೆದಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ದಿಢೀರ್ ರಾಜೀನಾಮೆ ನೀಡಿ ಸುದ್ದಿಯಾಗಿದ್ರು. ಇದೀಗ ಖಾಕಿ ಕಳಚಿದ ಮೇಲೂ ಅಣ್ಣಾಮಲೈ ಸುದ್ದಿಯಾಗಿದ್ದಾರೆ. ಸದಾ ಖಾಕಿ ತೊಟ್ಟು ಸ್ಟ್ರಿಕ್ಟ್ ಆಗಿ ಇರುತ್ತಿದ್ದ ಅಣ್ಣಾಮಲೈ ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ.
ಖಾಕಿ ಯೂನಿಫಾರ್ಮ್ ಕಳಚಿ ಕಪ್ಪು ಲುಂಗಿ , ಹೆಗಲಿಗೊಂದು ಕಪ್ಪು ಶಾಲು ಹಾಕಿ 18 ಮೆಟ್ಟಿಲೇರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಬೆಟ್ಟ ಹತ್ತುತ್ತಾ, ಇಳಿಯುತ್ತಾ ಮಾಲೆ ಹಾಕಿದ ಅಯ್ಯಪ್ಪ ಭಕ್ತರು ಅಣ್ಣಾಮಲೈ ಕಂಡು ಸೆಲ್ಫೀಗೆ ಮುಗಿಬಿದ್ದಿದ್ದಾರೆ. ಎಲ್ಲರೂ ಸಿಂಗಂ ಜೊತೆ ಕೈ ಕುಲುಕಿ ಮಾತನಾಡಿದ್ದಾರೆ. ಶಬರಿಮಲೆಗೆ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಭಕ್ತರು ಭೇಟಿಕೊಟ್ಟು ದರ್ಶನ ಪಡೆಯುತ್ತಾರೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬಂದ ಹೆಚ್ಚಿನವರಿಗೆ ಅಣ್ಣಾಮಲೈ ಬಗ್ಗೆ ಗೊತ್ತಿತ್ತು. ಕೇರಳದ ಸ್ಥಳೀಯ ಎಸ್ಪಿ ಕೂಡ ಅಣ್ಣಾಮಲೈ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಬಹಳ ಸಮಯದಿಂದ ಶಬರಿಮಲೆಗೆ ಬರುವ ಸಂಕಲ್ಪ ಮಾಡಿದ್ದೆ. ಕೆಲಸದ ಒತ್ತಡದಲ್ಲಿ ಆಗಿರಲಿಲ್ಲ. ಮುಂದೇನು ಅಂತ ಆಮೇಲೆ ಹೇಳ್ತೇನೆ. ಸದ್ಯ ದೇವರ ದರ್ಶನ ಮಾಡಿದ್ದೇನೆ ಅಂತ ಅಣ್ಣಾಮಲೈ ಹೇಳಿದ್ದಾರೆ.
ಈ ತಪ್ಪು ಮಾಡಿದ್ರೆ ನಿಮಗೆ ತಪ್ಪಿದ್ದಲ್ಲ ಗ್ರಹಚಾರ..!! ಮಿಸ್ ಮಾಡದೇ ಈ ವಿಡಿಯೋ ನೋಡಿ