Sunday, May 26, 2024

Latest Posts

ಘೋಸ್ಟ್ ಚಿತ್ರದ ಪೋಸ್ಟರ್ ರೀಲಿಸ್ ಮಾಡಲಿರುವ ಕಿಚ್ಚ

- Advertisement -

ಜುಲೈ 12 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 60ನೇ ಹುಟ್ಟು ಹಬ್ಬವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಹಿನ್ನೆಲೆ ನಟ ಶ್ರೀನಿ ನಿರ್ದೇಶನದಲ್ಲಿ ಘೋಸ್ಟ್ ಚಿತ್ರವು ಸೆಟ್ಟೇರಲಿದೆ. ಇಂದು ಚಿತ್ರದ ಪೋಸ್ಟರ್‌ನ್ನು ಅಭಿನಯ ಚಕವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ.

ಪೋಸ್ಟರ್‌ನಲ್ಲಿ ಕಿಂಗ್ ಆಫ್ ಆಲ್ ಮಾಸಸ್ ಎಂಬ ಸಾಲು ಬರೆದಿದ್ದು, ಕುತೂಹಲ ಹುಟ್ಟಿಸಿದೆ. ಚಿತ್ರ ಸಂದೇಶ್ ಪ್ರೋಡಕ್ಷನ್ ಬ್ಯಾನರ್‌ನ  ಅಡಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಸಂಸ್ಥೆಯ 29ನೇ ಸಿನಿಮಾ ಆಗಿದೆ.

ಸಂದೇಶ್ ನಾಗರಾಜ್ ಈ ಚಿತ್ರ ಅರ್ಪಿಸುತ್ತಿದ್ದಾರೆ. ಸಂದೇಶ್ ಎನ್. ಅವರು ನಿರ್ಮಾಪಕರು. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಮಹೇಂದ್ರ ಸಿಂಹ ಈ ಚಿತ್ರದ ಛಾಯಾಗ್ರಾಹಕರು. ಆಗಸ್ಟ್ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

- Advertisement -

Latest Posts

Don't Miss