Thursday, March 20, 2025

Latest Posts

ಸುಳ್ಳು ಹೇಳಿ ಆಭರಣದೊಂದಿಗೆ ಪರಾರಿ

- Advertisement -

special story

ಮಾತಿನ ಮೋಡಿಗೆ ಮತ್ತು ಬಟ್ಟಿಗೆ ಅವರ ಐಶರಾಮಿ ಜೀವನಕ್ಕೆ ಎಂತಹವರು ಸಹ ನಂಬುತ್ತಾರೆ. ಊಟಬಲ್ಲವನಿಗೆ ರೋಗವಿಲ್ಲ ಮತುಬಲ್ಲವನಿಗೆ ಜಗಳವಿಲ್ಲ. ಎಂಬ ಗಾದೆ ಗೊತ್ತಿತ್ತು ಆದರೆ ಬಟ್ಟೆಬಲ್ಲವನಿಗೆ ನಂಬದವರಿಲ್ಲ ಎಂಬುದನ್ನು ಸಹ ಇಲ್ಲೊಬ್ಬ ವ್ಯಕಿ ಸಾಬೀತು ಮಡಿದ್ದಾನೆ. ಅಷ್ಟೆ ಅಲ್ಲದೆ ತನ್ನಮಾತಿನ ಮೂಲಕವೇ ಹೊಟೆಲ್ ಸಿಬ್ಬಂದಿಗಳನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿ ಆಭರಣಗಳನ್ನು ಸಹ ದೋಚಿ ಪರಾರಿಯಾಗಿದ್ದಾನೆ.ಅದು ಎಲ್ಲಿ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ

ನವದೆಹಲಿ: ತಾನು ಅಬುಧಾಬಿಯ ರಾಜಮನೆತನದ ಅಧಿಕಾರಿ ಎಂದು ಹೇಳಿಕೊಂಡು  ದೆಹಲಿಯ  ಲೀಲಾ ಪ್ಯಾಲೇಸ್ ಹೋಟೆಲ್​ಗೆ ಲಕ್ಷಗಟ್ಟಲೆ ಹಣ ವಂಚಿಸಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಮಂಗಳೂರಿನ ಪೂತ್ತೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು 41 ವರ್ಷದ ಮೊಹಮ್ಮದ್​​ ಷರೀಫ್ ಎಂದು ಗುರುತಿಸಲಾಗಿದೆ. ಮೊಹಮ್ಮದ್​ ಷರೀಫ್​ ಕಳೆದ ವರ್ಷ ಮೂರು ತಿಂಗಳು ಪಂಚತಾರಾ ಹೋಟೆಲ್​ನಲ್ಲಿ  ತಂಗಿದ್ದು, ತಾನು ಅಬುಧಾಬಿಯ ರಾಜಮನೆತನದ ಸದಸ್ಯ ಶೇಖ್​ ಫಲಾಹ್​ ಬಿನ್ ಜಾಯೆದ್​ ಅಲ್​ ನಹ್ಯಾನ್ ಅವರ  ಉದ್ಯೋಗಿಯಂತೆ ನಟಿಸಿ ಬಿಲ್ ಪಾವತಿಸದೇ ಎಸ್ಕೇಪ್ ಆಗಿದ್ದನು. ಅಷ್ಟೇ ಅಲ್ಲದೇ ಹೋಟೆಲ್ ರೂಮ್​ನಲ್ಲಿದ್ದ ಬೆಳ್ಳಿ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹೋಟೆಲ್ ಆಡಳಿತ ಮಂಡಳಿ ಆರೋಪಿಸಿದೆ. 35 ಲಕ್ಷ ರೂ. ಹೋಟೆಲ್‌ ಬಿಲ್‌ ಮಾಡಿದ್ದನು. ಆದರೆ, ಷರೀಫ್‌ ಕೇವಲ 11.5 ಲಕ್ಷ ರೂ. ಅಷ್ಟೇ ಪಾವತಿಸಿದ್ದ. ಹೋಟೆಲ್​ ಕೊಠಡಿಯಲ್ಲಿದ್ದ ತಂಗಿದ್ದ ಆತ 23,46,413 ರೂ. ಬಾಕಿಯನ್ನು ಉಳಿಸಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದೆ.

- Advertisement -

Latest Posts

Don't Miss