Sunday, May 26, 2024

Latest Posts

ಮದುವೆ ನಿಶ್ಚಯವಾಗಿದ್ದ ಹುಡುಗನ ಜೊತೆ ತೆರಳಿದ್ದಅಪ್ರಾಪ್ತ ಬಾಲಕಿ‌ ಅನುಮಾನಾಸ್ಪದ ಸಾವು

- Advertisement -

ಹಾಸನ‌:  ಮದುವೆ ನಿಶ್ಚಯವಾಗಿದ್ದ ಹುಡುಗನ ಜೊತೆ ತೆರಳಿದ್ದ ಅಪ್ರಾಪ್ತ ಬಾಲಕಿ‌ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯಲ್ಲಿ ಘಟನೆ ನಡೆದಿದೆ. ಕೂಡ್ಲೂರು ಗ್ರಾಮದ ದಿನೇಶ್ ಎಂಬುವರ ಜೊತೆ ಎರಡು ತಿಂಗಳ ಹಿಂದೆ 16 ವರ್ಷದ ಬಾಲಕಿಗೆ ಮನೆಯವರು ಮದುವೆ ನಿಶ್ಚಯ ಮಾಡಿದ್ದರು. ಇನ್ನು ನವೆಂಬರ್ 29 ರ ರಾಮನಾಥಪುರ ಷಷ್ಠಿ ಜಾತ್ರೆಗೆಂದು ದಿನೇಶ್ ಬಾಲಕಿಯನ್ನು ಕರೆದೊಯ್ದಿದ್ದ. ಸೋಮವಾರ ಮದ್ಯಾಹ್ನ 2-30 ಗಂಟೆಗೆ ಬಾಲಕಿಯನ್ನು ಕರೆದೊಯ್ದು, ನಾಲ್ಕು ಗಂಟೆಗೆ ನಿಮ್ಮ ಮಗಳು ವಿಷ ಕುಡಿದಿದ್ದಾಳೆಂದು ಪೋಷಕರಿಗೆ ಫೋನ್ ಮಾಡಿದ್ದಾನೆ. ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರೊದಾಗಿ ದಿನೇಶ್ ಕಡೆಯವರು ಹೇಳಿದ್ದರು ಆದರೆ ಆಸ್ಪತ್ರೆಗೆ ದಾಖಲಾಗುವ ಮುನ್ನ ದಾರಿ ಮಧ್ಯದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ.

ಏಮ್ಸ್ ಇ-ಹಾಸ್ಪಿಟಲ್ ಡೇಟಾ ಮರುಸ್ಥಾಪನೆ : 8ನೇ ದಿನವೂ ಏಮ್ಸ್ ಸರ್ವರ್ ಡೌನ್

ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ತಾನೂ ವಿಷವನ್ನು ಸೇವನೆ ಮಾಡಿ ಆಸ್ಪತ್ರೆಗೆ ಬಾಲಕಿಯನ್ನು ದಿನೇಶ್ ಕರೆದೊಯ್ದಿದ್ದ. ದಿನೇಶ್ ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಘಟನೆ ಬಗ್ಗೆ ತನಿಖೆ ನಡೆಸಿದ್ದಾರೆ. ಚೈಲ್ಡ್ ಲೈನ್ ಗೆ ಬಂದ ಅಪರಿಚಿತ ಕರೆ ಆದರಿಸಿ ಪೋಷಕರಿಂದ ಮಾಹಿತಿ ಪಡೆದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಎಸ್ಪಿ ಹಾಗೂ ಮಕ್ಕಳ ದೌರ್ಜನ್ಯ ತಡೆ ವಿಶೇಷ ಪೊಲೀಸ್ ಅಧಿಕಾರಿಗೂ ದೂರನ್ನು ನೀಡಲಾಗಿದೆ. ಬಾಲಕಿ ಸಾವಿನ ಬಗ್ಗೆ ಅನುಮಾನ ಇದ್ದು, ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಬಾಲಕಿ ಮೃತದೇಹದ ಮೇಲೆ ಗಾಯದ ಗುರುತು, ಕುತ್ತಿಗೆಯಲ್ಲಿ ಪೆಟ್ಟಾಗಿರೊ ಗಾಯದ ಗುರುತು ಪತ್ತೆಯಾಗಿದೆ. ಗಾಯದ ಗುರುತು ಇರೋ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಅನುಮಾನ ಹುಟ್ಟಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಿಸಲಾಗಿದೆ.

ಹಿಂದೂ ಧರ್ಮ ನಿರ್ನಾಮ ಮಾಡಲು ಲವ ಜಿಹಾದ್ ರೂಪದಲ್ಲಿ ಭಯೋತ್ಪಾದನೆ ನಡೆಸಲಾಗುತ್ತಿದೆ : ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಬೆಂಗಳೂರಿನ ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್, ಲೈಟರ್, ಸಿಗರೇಟ್, ನೀರಿನ ಬಾಟಲ್ ನಲ್ಲಿ ಮದ್ಯ ಪತ್ತೆ

- Advertisement -

Latest Posts

Don't Miss