ಬೆಂಗಳೂರು: ಚಿನ್ನದ ಮೇಲೆ ಹೂಡಿಕೆ ಮಾಡಿಸಿಕೊಂಡು ಲಕ್ಷಾಂತರ ಮಂದಿಗೆ ನಾಮ ಹಾಕಿದ್ದ ಐಎಂಎ ಜುವೆಲ್ಲರ್ಸ್ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್ ನನ್ನು ಇದೀಗ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
ಬಹುಕೋಟಿ ವಂಚನೆ ಆರೋಪ ಹೊತ್ತು ದುಬೈನಲ್ಲಿ ತಲೆ ಮರೆಸಿಕೊಂಡಿದ್ದ ಐಎಂಎ ಮಾಲೀಕ ಮೊಹಮದ ಮನ್ಸೂರ್ ಬಂಧನವಾಗ ಬೆನ್ನಲ್ಲೇ ಇದೀಗ ಆತನನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ಸುಮಾರು ಒಂದು ತಿಂಗಳು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಂಚಕ ಮನ್ಸೂರ್ ನನ್ನು ಜುಲೈ 19 ರಂದು ಎಸ್ ಐಟಿ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದರು. ತನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ್ರೆ ಬಡ್ಡಿ ನೀಡುವ ಆಮಿಷವೊಡ್ಡಿ ರಾಜ್ಯ ಹಾಗೂ ಹೊರ ರಾಜ್ಯಗಳ ಗ್ರಾಹಕರನ್ನು ಸೆಳೆದಿದ್ದ ಮನ್ಸೂರ್ ಏಕಾಏಕಿ ನಾಪತ್ತೆಯಾಗಿದ್ದ, ಅಲ್ಲದೆ ತನಗೆ ರಾಜಕೀಯ ಮುಖಂಡರೊಬ್ಬರು ಕೋಟ್ಯಂತರ ರೂಪಾಯಿ ವಂಚಿಸಿದ್ದರಿಂದ ನಾನು ನಷ್ಟದಲ್ಲಿದ್ದು ಆತ್ಮಹತ್ಯೆ ಮಾಡಿಕೊಳ್ತೇನೆ ಅಂತ ವಿಡಿಯೋ ಮೂಲಕ ತಿಳಿಸಿದ್ದ.
ಸ್ಥಿತಿವಂತರೂ ಅಲ್ಲದೆ ಸಾವಿರಾರು ಮಂದಿ ಬಡವರು ಈತನನ್ನು ನಂಬಿ ಮೋಸಹೋಗಿದ್ದಾರೆ. ಈತನಿಗಾಗಿ ಹುಡುಕಾಟ ನೆಡಸಿದ್ದ ಪೊಲೀಸರು ಕೊನೆಗೂ ಈತನನ್ನು ಬಂಧಿಸಿದ್ದು ಜುಲೈ 23ರವರೆಗೂ ಜಾರಿ ನಿರ್ದೇಶನಾಲಯದ ಸುಪರ್ದಿಗೆ ವಹಿಸಿದ್ದು, ಆರೋಪಿಯ ವಹಿವಾಟು ಕುರಿತು ಇ.ಡಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಲಿದ್ದಾರೆ.