Saturday, July 27, 2024

Latest Posts

BREAKING NEWS: ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿ: ಜುಲೈ18ಕ್ಕೆ ಮತದಾನ

- Advertisement -

ನವದೆಹಲಿ: ಭಾರತದ 15ನೇ ರಾಷ್ಟ್ರಪತಿ ಚುನಾವಣೆಗಾಗಿ ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಪ್ರಕಟಿಸಲಾಗಿದೆ. ಜುಲೈ.18ರಂದು ಮತದಾನ ನಡೆಯಲಿದ್ದು, ಜುಲೈ 21ರಂದು ಮತಏಣಿಕೆ ನಡೆದು, ಫಲಿತಾಂಶ ಪ್ರಕಟಗೊಳ್ಳಲಿದೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಕುಮಾರ್ ಅವರು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರ ಜುಲೈ 24ರಂದು ಕೊನೆಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಜುಲೈ 18ರಂದು ಚುನಾವಣೆ ನಡೆಸಲಾಗುತ್ತಿದ್ದು, ಜುಲೈ 21ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದರು.

ಇನ್ನೂ ಇದೇ ಜೂನ್ 15ರಂದು ರಾಷ್ಟ್ರಪತಿ ಚುನಾವಣೆ ಸಂಬಂಧ ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಜೂನ್ 29, 2022 ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ್ರೇ, ನಾಮಪತ್ರಗಳ ಪರಿಶೀಲನೆ 30-06-2022ರಂದು ನಡೆಯಲಿದೆ. ಉಮೇದುವಾರಿಕೆ ವಾಪಾಸ್ ಪಡೆಯಲು ದಿನಾಂಕ 02-07-2022 ಕೊನೆಯಾಗಿದೆ.

ಅಂದಹಾಗೇ ರಾಷ್ಟ್ರಪತಿ ಚುನಾವಣೆಯಲ್ಲಿ ದೇಶದ 776 ಎಂಪಿಗಳು, 4,033 ಎಂಎಲ್ ಎಗಳು ಸೇರಿದಂತೆ ಒಟ್ಟು 4,806 ಜನಪ್ರತಿನಿಧಿಗಳು ಮತದಾನ ನಡೆಮಾಡಲಿದ್ದಾರೆ.

 

- Advertisement -

Latest Posts

Don't Miss