Sunday, May 19, 2024

Latest Posts

ಇಂಥ ಹಣ್ಣುಗಳನ್ನ ತಿನ್ನೋದು ಬಿಡಿ.. ನೋಡಿರೋಕ್ಕೂ ಸಾಧ್ಯವಿಲ್ಲಾ..!

- Advertisement -

ಈ ಮೊದಲು ನಾವು ನಿಮಗೆ ವಿಚಿತ್ರ ಪಕ್ಷಿಗಳ ಬಗ್ಗೆ ಹೇಳಿದ್ದೆವು. ಅದೇ ರೀತಿ ನಾವಿಂದು ವಿಚಿತ್ರ ಹಣ್ಣುಗಳ ಬಗ್ಗೆ ಹೇಳಲಿದ್ದೇವೆ. ನಾವಿಂದು ಹೇಳುವ ಹಣ್ಣುಗಳನ್ನು ನೀವು ನೋಡಿರೋದು ಅಪರೂಪ. ಅಥವಾ ಬರೀ ಫೋಟೋ ಮತ್ತು ವೀಡಿಯೋಗಳಲ್ಲಷ್ಟೇ ಇಂಥ ಹಣ್ಣುಗಳನ್ನ ನೋಡಿರ್ತೀರಿ. ಹಾಗಾದ್ರೆ ಬನ್ನಿ ಪ್ರಪಂಚದಲ್ಲಿ ಸಿಗುವ ಹೆಚ್ಚಿನ ಬೆಲೆಯ, ವಿಚಿತ್ರವಾಗಿ ಕಾಣುವ ಹಣ್ಣುಗಳ ಬಗ್ಗೆ ತಿಳಿಯೋಣ..

ಚೌಕಾಕಾರದ ಕಲ್ಲಂಗಡಿ ಹಣ್ಣು: ಈ ಕಲ್ಲಂಗಡಿ ಹಣ್ಣನ್ನು ಜಪಾಾನ್‌ನಲ್ಲಿ ಬೆಳೆಯಲಾಗುತ್ತದೆ. ಇದರ ಸೀಸನ್ ಬಂದಾಗ 100 ಪೀಸ್ ಕಲ್ಲಂಗಡಿ ಹಣ್ಣು ಸಿಗೋದು ಅಪರೂಪ. ಅಷ್ಟು ಅಪರೂಪದ ಹಣ್ಣಿದು. ಜಪಾನ್‌ನಲ್ಲಿ ಯಾವುದೋ ಹಬ್ಬದ ಸಮಯದಲ್ಲಿ ಈ ಕಲ್ಲಂಗಡಿ ಹಣ್ಣನ್ನ ತಿನ್ನೋದು. ಇದು ನಾವು ನೀವು ತಿನ್ನುವ ಕಲ್ಲಂಗಡಿ ಹಣ್ಣಿನ ಸ್ವಾದಕ್ಕಿಂತಲೂ ಬೇರೆಯದಾಗಿರುತ್ತದೆ. ಮತ್ತು ಜಪಾನಿಗರು ಇದನ್ನು ಕೊಂಡುಕೊಳ್ಳಲು ಎಷ್ಟು ಬೇಕೋ ಅಷ್ಟು ಹಣ ನೀಡುತ್ತಾರೆ. ಇದರ ಬೆಲೆ ಸಾವಿರಾರು ರೂಪಾಯಿಯಾಗಿರುತ್ತದೆ.

ಬಿಳಿ ಸ್ಟ್ರಾಬೇರಿ: ಸಾಧಾರಣವಾಗಿ ನಾವು ಚಳಿಗಾಲದಲ್ಲಿ ಕೆಂಪು ಸ್ಟ್ರಾಬೇರಿಯನ್ನ ತಿಂದಿರ್ತೀವಿ. ಆದ್ರೆ ಬಿಳಿ ಸ್ಟ್ಪಾಬೇರಿನೂ ಇದೆ. ಅದನ್ನ ಪೈನ್ ಬೆರ್ರಿ ಅಂತಾ ಕರೀತಾರೆ. ಕೆಂಪು ಸ್ಟ್ರಾಬೇರಿಯಲ್ಲಿ ಬಿಳಿ ಬಣ್ಣದ ಬೀಜಗಳನ್ನ ನಾವು ಕಾಣ್ತೀವಿ. ಆದ್ರೆ ಪೈನ್ ಬೇರಿ ಬಿಳಿ ಬಣ್ಣದ ಹಣ್ಣಾಗಿದ್ದು, ಕೆಂಪು ಬಣ್ಣದ ಬೀಜವನ್ನು ಹೊಂದಿರುತ್ತದೆ. ಇದರ ಸ್ವಾದ ಪೈನಾಪಲ್ ಹಣ್ಣಿನ ರೀತಿ ಇರುವ ಕಾರಣಕ್ಕೆ ಈ ಹಣ್ಣನ್ನು ಪೈನ್  ಬೆರಿ ಅಂತಾ ಕರೆಯಲಾಗುತ್ತದೆ.

ಕೆಂಪು ನಿಂಬೆಹಣ್ಣು: ನಾವೆಲ್ಲ ಹಳದಿ ನಿಂಬೆಹಣ್ಣನ್ನ ಬಳಸಿರ್ತೀವಿ. ಅದನ್ನು ಬಿಟ್ಟರೆ ಕಾಯಿಯಾಗಿರುವ ಹಸಿರು ನಿಂಬೆ ಕಾಯಿಯನ್ನ ನೋಡಿರ್ತೀವಿ. ಆದ್ರೆ ಕೆಂಪು ನಿಂಬೆಹಣ್ಣು ಕೂಡಾ ಇದೆ. ಅದು ನೋಡಲು ರಕ್ತದ ಬಣ್ಣದ್ದಾಗಿದ್ದು, ಅದನ್ನ ರೆಡ್ ಲೈಮ್ ಅಂತಾ ಕರೆಯಲಾಗುತ್ತದೆ. ಇದನ್ನ ಆಸ್ಟ್ರೇಲಿಯಾದಲ್ಲಿ ಬೆಳೆಯಲಾಗುತ್ತದೆ.

ಬುದ್ಧನಾಕಾರದ ಪೀಯರ್ಸ್ ಹಣ್ಣು: ಪೀಯರ್ಸ್ ಹಣ್ಣನ್ನ ಹಲವರು ತಿಂದಿರ್ತೀರಾ. ಆದ್ರೆ ಬುದ್ಧನಾಕಾರದ ಪೀಯರ್ಸ್ ಹಣ್ಣು ತಿನ್ನೋರು ಅಪರೂಪದಲ್ಲೇ ಅಪರೂಪ ಅಂತಾ ಹೇಳಬಹುದು. ಯಾಕಂದ್ರೆ ಇದರ ಬೆಲೆ ಸಾವಿರಾರು ರೂಪಾಯಿಯಾಗಿದ್ದು, ಇದನ್ನ  ಚೀನಾದ ಕಂಪನಿಯೊಂದು ಪ್ರೊಡ್ಯುಸ್ ಮಾಡುತ್ತದೆ.

- Advertisement -

Latest Posts

Don't Miss