Saturday, July 27, 2024

Latest Posts

ಮೈಸೂರಿನ ಬಗ್ಗೆ ನಿಮಗೆ ಗೊತ್ತಿರದ 30 ಕುತೂಹಲಕಾರಿ ಸಂಗತಿಗಳು..!

- Advertisement -

ಕರ್ನಾಟಕ ಹಲವು ವಿಷಯಗಳಿಗೆ ಪ್ರಸಿದ್ಧಿ ಪಡೆದಿದೆ. ಅಂತಹುದರಲ್ಲಿ ಮೈಸೂರು ದಸರಾ ಕೂಡ ಒಂದು. ವಿಶ್ವವಿಖ್ಯಾತ ಮೈಸೂರು ದಸರಾ ನೋಡಲು ಕರ್ನಾಟಕದಿಂದಷ್ಟೇ ಅಲ್ಲದೇ, ಹೊರ ರಾಜ್ಯ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.

ಸುಂದರ ಪ್ರವಾಸಿ ತಾಣಗಳನ್ನೊಳಗೊಂಡ ಮೈಸೂರಿನ ಬಗ್ಗೆ ನಾವಿವತ್ತು 30 ವಿಷಯಗಳನ್ನ ಹೇಳ್ತೀವಿ.

1.. ಮೈಸೂರು ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಸ್ಥಾಪನೆಯಾದ ಮತ್ತು ಭಾರತೀಯರೇ ಸ್ಥಾಪಿಸಿದ ಮೊದಲ ವಿಶ್ವ ವಿದ್ಯಾಲಯ. ಮತ್ತು ಭಾರತದಲ್ಲಿ ಆರನೇ ವಿಶ್ವವಿದ್ಯಾಲಯ.

2.. ರಾಜ್ಯದಲ್ಲಿ ಮೊದಲು ವೈದ್ಯಕೀಯ ಕಾಲೇಜು ಸ್ಥಾಪನೆಗೊಂಡಿದ್ದು ಇಲ್ಲಿಯೇ.

3.. ಚಾಮರಾಜೇಂದ್ರ ಮೃಗಾಲಯ ಭಾರತದ ಮೂರನೇ ಪುರಾತನ ಮೃಗಾಲಯವಾಗಿದೆ.

4.. ಅಲ್ಲದೇ, ಚಾಮರಾಜೇಂದ್ರ ಮೃಗಾಲಯ ಏಷ್ಯಾದಲ್ಲೇ ಎರಡನೇ ಅತ್ತುತ್ತಮ ಮೃಗಾಲಯ ಎಂಬ ಹಿರಿಮೆ ಹೊಂದಿದೆ.

5.. ವಿಶ್ವದಲ್ಲಿಯೇ ಅತಿ ದೊಡ್ಡ ಕಾರ್ಪೋರೇಟ್ ವಿಶ್ವವಿದ್ಯಾಲಯ ಈ ನಗರದಲ್ಲಿದೆ.

6.. 2015 ಮತ್ತು 2016ರಲ್ಲಿ ಸತತವಾಗಿ 2 ಬಾರಿ ಮೈಸೂರಿಗೆ ಭಾರತದ ನಂ.1 ಸ್ವಚ್ಛನಗರ ಎಂಬ ಬಿರುದು ಸಿಕ್ಕಿತ್ತು.

7.. ಇನ್ನೊಂದು ವಿಶೇಷ ಸಂಗತಿ ಏನೆಂದರೆ ಮೈಸೂರಿಗೆ ಅಷ್ಟಾಂಗ ಯೋಗ ರಾಜಧಾನಿ ಎಂಬ ಹೆಸರೂ ಇದೆ.

8.. ಮೈಸೂರು ಜಂಕ್ಷನ್ ರೈಲು ನಿಲ್ದಾಣ ಸ್ವಚ್ಛವಾಗಿದ್ದು, ದೇಶದಲ್ಲೇ ಸ್ವಚ್ಛ ರೈಲು ನಿಲ್ದಾಣ ಎನ್ನಿಸಿಕೊಂಡಿದೆ.

9.. ಇಲ್ಲಿಯ ರೈಲು ನಿಲ್ದಾಣ ದೇಶದ ಮೊದಲ ದೃಷ್ಟಿ ವಿಕಲಚೇತನ ಸ್ನೇಹಿ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

10.. ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಯೋಜಿತ ಅಭಿವೃದ್ಧಿ ಕೈಗೊಂಡ ಹೆಗ್ಗಳಿಕೆ ಮೈಸೂರಿನದ್ದು.

11.. ಏಷ್ಯಾದಲ್ಲಿ ಮೊದಲ ಕ್ಷಯ ರೋಗ ಆಸ್ಪತ್ರೆ ಸ್ಥಾಪಿಸಿದ್ದು, ಈ ನಗರದಲ್ಲಿ.

12.. ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರ ಎಂದರೆ ಮೈಸೂರು.

13.. ರೇಷ್ಮೆ, ಮಸಾಲೆ ದೋಸೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಬೋಂಡಾ, ವಿಳ್ಯದೆಲೆಗೆ ಮೈಸೂರು ಪ್ರಖ್ಯಾತಿ.

14.. ತಾಜ್‌ಮಹಲ್‌ ನೋಡಲು ಬರುವ ಪ್ರವಾಸಿಗರಿಗಿಂತಲೂ, ಮೈಸೂರು ಅರಮನೆ ನೋಡಲು ಬರುವ ಪ್ರವಾಸಿಗರೇ ಹೆಚ್ಚು.

15.. ಭಾರತದಲ್ಲಿ ಮೊದಲ ಬಾರಿಗೆ ವಿಮಾನವನ್ನು ನಿರ್ಮಿಸಿದ್ದು ಮೈಸೂರಿನ ವೆಂಕಟ ಸುಬ್ಬಶೆಟ್ಟಿ.

16..ತೃತೀಯ ಲಿಂಗಿಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಟ್ಟ ಭಾರತದ ಮೊದಲ ನಗರ ಮೈಸೂರು.

17.. ಭಾರತದಲ್ಲಿ ಅಪರೂಪದ ರೈಲು ಸಂಗ್ರಹಾಲಯ ಇರುವುದು ಒಂದು ಮೈಸೂರಿನಲ್ಲಿ ಮತ್ತೊಂದು ದೆಹಲಿಯಲ್ಲಿ.

18.. ಭಾರತ ಸೇನೆಯ ಆಹಾರ ಸಂಶೋಧನೆ ಪ್ರಯೋಗಾಲಯ ಮೈಸೂರಿನಲ್ಲಿದೆ.

https://youtu.be/5gb4sNwZBkE

19.. ಮೈಸೂರಿಗೆ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ಬಿರುದಿದೆ.

20.. ಚುನಾವಣೆಗೆ ಗುರುತಿನ ಕುರುಹಿಗಾಗಿ ಬೆರಳಿಗೆ ಬಳಸುವ ಶಾಹಿ ಉತ್ಪಾದನೆಗೊಳ್ಳುವುದು ಮೈಸೂರಿನಲ್ಲಿ.

21.. ಮುಂಬೈ ನಂತರ ರೇರ್ ಮಟಿರಿಯಲ್ ಪ್ಲಾಂಟ್ ಇರುವುದು ಮೈಸೂರಿನಲ್ಲಿ.

22.. ರಾಜ್ಯದಲ್ಲಿ ಆಹಾರ ಸಂಶೋಧನೆ ಕೇಂದ್ರ ಇರುವುದು ಮೈಸೂರಿನಲ್ಲಿ ಮಾತ್ರ.

23.. ಭಾರತದ ಮೊದಲ ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟಿಂಗ್ ಸಿಸ್ಟಮ್ ಇಲ್ಲಿದೆ.

24.. ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಚರ್ಚ್ ಎನ್ನಿಸಿಕೊಂಡಿರುವ ಸಂತ್ ಫಿಲೋಮಿನಾ ಚರ್ಚ್ ಇರುವುದು ಮೈಸೂರಿನಲ್ಲಿ.

25.. ಮೈಸೂರಿನಲ್ಲಿ ಪಕ್ಷಿಗಳಿಗಾಗಿಯೇ ನಿರ್ಮಿಸಿದ ಆವರಣವಿದೆ. ಇದು ಭಾರತದಲ್ಲಿಯೇ ಅತೀ ದೊಡ್ಡ ಹಕ್ಕಿ ಕಾಪು.

26.. ಮೊದಲ ಖಾಸಗಿ ರೇಡಿಯೋ ಸ್ಟೇಷನ್ ಇದ್ದಿದ್ದು ಮೈಸೂರಿನಲ್ಲಿಯೇ. ಆಲ್ ಇಂಡಿಯಾ ರೇಡಿಯೋಕ್ಕೆ ಆಕಾಶವಾಣಿ ಎಂಬ ಹೆಸರು ಕೊಟ್ಟಿದ್ದು, ಇಲ್ಲಿಯವರೇ ಆದ ನಾರಾಯಣ ಕಸ್ತೂರಿಯವರು.

27.. ಬೆಂಗಳೂರಿನ ನಂತರ ಕರ್ನಾಟಕದ ಅತೀ ದೊಡ್ಡ ಐಟಿ ವಲಯ ಇರೋದು ಮೈಸೂರಿನಲ್ಲಿ.

28.. ಭಾರತದಲ್ಲಿ ನೋಟುಗಳು ತಯಾರಾಗುವುದು ನಾಲ್ಕು ನಗರಗಳಲ್ಲಿ ಮಾತ್ರ. ಅದರಲ್ಲಿ ಮೈಸೂರು ಕೂಡಾ ಒಂದು.

29.. ಪ್ರಪಂಚದ ಅತಿ ದೊಡ್ಡ ಬಣ್ಣ ಉತ್ಪಾದನಾ ಘಟಕ ಏಷಿಯನ್ ಪೇಂಟ್ಸ್ ಉತ್ಪಾದನೆಗೊಳ್ಳುವುದು ಮೈಸೂರಿನಲ್ಲಿ.

30.. ಭಾರತದ ಒಂದು ಸೇನಾ ಹಡಗಿಗೆ ಮೈಸೂರಿನ ಹೆಸರಿಟ್ಟಿದ್ದಾರೆ. ಆ ಹೆಸರೇ, ಐಎನ್ ಎಸ್ ಮೈಸೂರು.

- Advertisement -

Latest Posts

Don't Miss