Saturday, July 27, 2024

Latest Posts

ಮುಂಬೈಗೆ ಮಣಿದ ಚೆನ್ನೈ ಮನೆಗೆ 

- Advertisement -

ಮುಂಬೈ:ಡೇನಿಯಲ್ ಸ್ಯಾಮ್ಸ್ ಅವರ ಮಾರಕ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಎದುರು ಹೀನಾಯವಾಗಿ ಸೋಲು ಕಂಡಿದೆ. ಈ ಸೋಲಿನೊಂದಿಗೆ ಧೋನಿ ಪಡೆಯ ಪ್ಲೇ ಆಫ್ ಕನಸು ಭಗ್ನಗೊಂಡಿದೆ.

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ದುಕೊಂಡಿತು.

ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ಡೇವೊನ್ ಕಾನ್ವೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ದಾಳಿಗಿಳಿದ ವೇಗಿ ಡೇನಿಯಲ್ ಸ್ಯಾಮ್ಸ್ (0) ಹಾಗೂ ಋತುರಾಜ್ ಗಾಯಕ್ವಾಡ್ (7), ಮೊಯಿನ್ ಅಲಿ (0), ಅವರುಗಳನ್ನ ಬೇಗನೆ ಪೆವಿಲಿಯನ್ಗೆ ಅಟ್ಟಿದರು. ರಾಬಿನ್ ಉತ್ತಪ್ಪ 1, ಅಂಬಾಟಿ ರಾಯ್ಡು 10, ಎಂ.ಎಸ್.ಧೋನಿ 36 ರನ್ ಹೊಡೆದರು.

ಶಿವಂ ದುಬೆ 10, ಡ್ವೇನ್ ಬ್ರಾವೋ 12, ಸಿಮ್ರಾಜೀತ್ ಸಿಂಗ್ 2, ಮುಖೇಶ್ ಚೌಧರಿ 4 ರನ್ ಗಳಿಸಿದರು. ಚೆನ್ನೈ ತಂಡ 16 ಓವರ್ ಗಳಲ್ಲಿ 97 ರನ್ ಗಳಿಗೆ ಆಲೌಟ್ ಆಯಿತು. ಮುಂಬೈ ಪರ ಡೇನಿಯಲ್ ಸ್ಯಾಮ್ಸ್ 3, ರೀಲೆ ಮೆರ್ಡಿತ್ ಹಾಗೂ ಕುಮಾರ್ ಕಾರ್ತಿಕೇಯಾ ತಲಾ 2 ವಿಕೆಟ್ ಪಡೆದರು. ರಮಣದೀಪ್ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು.

98 ರನ್ ಗಳ ಸಾಧಾರಣ ಮೊತ್ತ ಬೆನ್ನತ್ತಿದ ಮುಂಬೈ ತಂಡ ಆಘಾತ ಅನುಭವಿಸಿತು. ಇಶನ್ ಕಿಶನ್ 6, ರೋಹಿತ್ ಶರ್ಮಾ 18, ಡೇನಿಯಲ್ ಸ್ಯಾಮ್ಸ್ 1, ತಿಲಕ್ ವರ್ಮಾ 34 ರನ್ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.

ಹೃತಿಕ್ ಶೋಕಿನ್ 18, ಟಿಮ್ ಡೇವಿಡ್ ಅಜೇಯ 16 ರನ್ ಗಳಿಸಿದರು. ಮುಂಬೈ 14.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 103 ರನ್ ಪೇರಿಸಿತು. 3 ವಿಕೆಟ್ ಪಡೆದ ಡೇನಿಯಲ್ ಸ್ಯಾಮ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

- Advertisement -

Latest Posts

Don't Miss